Home » Belthangady: ಕರ್ತವ್ಯದ ಸಮಯದಲ್ಲಿ ತಹಶೀಲ್ದಾರ್‌ ಮೇಲೆ ಹಲ್ಲೆ ಯತ್ನ; ಪ್ರಕರಣ ದಾಖಲು!!!

Belthangady: ಕರ್ತವ್ಯದ ಸಮಯದಲ್ಲಿ ತಹಶೀಲ್ದಾರ್‌ ಮೇಲೆ ಹಲ್ಲೆ ಯತ್ನ; ಪ್ರಕರಣ ದಾಖಲು!!!

1 comment
Belthangady

Belthangady: ಸರಕಾರಿ ಕರ್ತವ್ಯದ ಸಮಯದಲ್ಲಿ ತಹಶೀಲ್ದಾರ್‌ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆಯೊಂದು ಬೆಳ್ತಂಗಡಿಯ ಮದಡ್ಕದಲ್ಲಿ ನಡೆದಿರುವ ಕುರಿತು ವರದಿಯಾಗಿದೆ. ಈ ಕುರಿತು ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Moral Policing: ಮತ್ತೊಂದು ನೈತಿಕ ಪೊಲೀಸ್‌ಗಿರಿ! ಹಿಂದೂ ಯುವಕ ಮುಸ್ಲಿಂ ಯುವತಿಗೆ ತಂಡದಿಂದ ಹಲ್ಲೆ!!!

ಬೆಳ್ತಂಗಡಿ ತಾಲೂಕು ತಹಶೀಲ್ದಾರ್‌ ಪೃಥ್ವಿ ಸಾನಿಕಂ ಅವರು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮದ್ದಡ್ಕ ಎಂಬಲ್ಲಿ ಜ. 18 ರಂದು ಬೆಳಿಗ್ಗೆ ಸರಕಾರಿ ಜಾಗದ ಒತ್ತುವರಿಯಾಗಿರುವ ಕುರಿತು ಪರಿಶೀಲನೆಗೆಂದು ಕಂದಾಯ ನಿರೀಕ್ಷಕರು, ಗ್ರಾಮ ಅಭಿವೃದ್ಧಿ ಅಧಿಕಾರಿಗಳ ಜೊತೆ ಸದ್ರಿ ಜಾಗಕ್ಕೆ ಸರಕಾರಿ ವಾಹನದಲ್ಲಿ ತೆರಳಿ ಪರಿಶೀಲನೆ ಮಾಡುತ್ತಿದ್ದರು.

ನಸೀರ್‌ ಮತ್ತು ರೌಫ್‌ ಎಂಬವರು ಸದ್ರಿ ಸ್ಥಳವನ್ನು ಒತ್ತುವರಿಸಿದ್ದು, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ತಹಶೀಲ್ದಾರ್‌ ಪೃಥ್ವಿ ಸಾನಿಕಂ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದಾರೆ ಹಾಗೂ ಸ್ಥಳದಲ್ಲಿದ್ದ ಕಂದಾಯ ನಿರೀಕ್ಷಕ ಪ್ರತೀಶ್‌ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ಮಾಡಿರುವ ಕುರಿತು ವರದಿಯಾಗಿದೆ.

ಈ ಕುರಿತು ತಹಶೀಲ್ದಾರ್‌ ಅವರು ನೀಡಿದ ದೂರಿನ ಮೇರೆರೆ ಜ.19 ರಂದು ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಐಪಿಸಿ 353, 504 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

You may also like

Leave a Comment