Bengaluru : 25 ವರ್ಷದ ಯುವಕನೋರ್ವನನ್ನು ಮಂಗಳಮುಖಿಯರ ಗುಂಪೊಂದು ಕಿಡ್ನಾಪ್ ಮಾಡಿ ಆಪರೇಷನ್ ಮಾಡಲು ಯತ್ನಿಸಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ನಡೆದಿದೆ.
ಹೌದು, ಕಳೆದ ಶುಕ್ರವಾರ ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಿಂದ 25 ವರ್ಷದ ಯುವಕನ್ನು ಮಂಗಳಮುಖಿಯರ ಗ್ಯಾಂಗ್ ಒಂದು ಕಿಡ್ನಾಪ್ ಮಾಡಿಕೊಂಡು ಹೋಗಿದೆ. ಯುವಕ ಕಿಡ್ನಾಪ್ ಆಗುತ್ತಿದ್ದಂತೆ ಕುಟುಂಬಸ್ಥರಿಂದ ಡಿಜೆ ಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು, ಅದರಂತೆ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿದ ಪೊಲೀಸರು ತನಿಖೆ ನಡೆಸಿದ್ದು, ಈ ವೇಳೆ ಯುವಕ ಟ್ರೆಸ್ ಮಾಡಿದಾಗ ಮಧುರೈ ನಲ್ಲಿ ಇದ್ದಾನೆ ಎಂದು ತಿಳಿದು ಬಂದಿದೆ.
ಕೂಡಲೇ ಮದುರೈಗೆ ತೆರಳಿ ಯುವಕನನ್ನು ಪೊಲೀಸರು ರಕ್ಷಿಸಿ ಕರೆ ತಂದಿದ್ದಾರೆ. ಸದ್ಯ ಅಲ್ಲಿ ಆಪರೇಷನ್ ಮಾಡಿಸಿ ಮಂಗಳಮುಖಿಯಾಗಿ ಪರಿವರ್ತನೆಗೆ ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನಲೆ ಯುವಕನನ್ನ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಯುವಕನಿಗೆ ನಿಜಕ್ಕೂ ಆಪರೇಷನ್ ಮಾಡಿಸಲಾಗಿದ್ಯಾ ಅನ್ನೋ ಬಗ್ಗೆ ಮೆಡಿಕಲ್ ಟೆಸ್ಟ್ ಮಾಡಲಾಗಿದೆ. ಸದ್ಯ ಮಂಗಳಮುಖಿಯರು ಪರಾರಿಯಾಗಿದ್ದು, ಶೋಧ ಕಾರ್ಯ ನಡೆಸಲಾಗುತ್ತಿದೆ.
