Bengaluru: ಸ್ನಾನ ಮಾಡಲೆಂದು ಬಾತ್ರೂಮ್ಗೆ ಹೋದ ಯುವತಿ ಒಬ್ಬಳು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಹೌದು, ಬೆಂಗಳೂರು(Bengaluru) ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅಡೇಪೇಟೆಯಲ್ಲಿ ಸ್ನಾನಕ್ಕೆ ಹೋಗಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಲಕ್ಷ್ಮೀ (25) ಮೃತ ಯುವತಿ.
ಆಂಧ್ರಪ್ರದೇಶದ ತಿರುಪತಿ ಮೂಲದ ಲಕ್ಷ್ಮೀ ತನ್ನ ಪತಿಯೊಂದಿಗೆ ಮಲ್ಲೇಶ್ವರಂನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದರು. ಅಡೇಪೇಟೆಯಲ್ಲಿರುವ ಸಂಬಂಧಿ ಸುಹಾಸಿನಿ ಎಂಬುವವರ ಮನೆಗೆ ಪತಿ ಜೊತೆ ಹೋಗಿದ್ದರು. ಈ ವೇಳೆ ಸ್ನಾನಕ್ಕೆಂದು ಹೋಗಿದ್ದ ಲಕ್ಷ್ಮೀ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಅಂದಹಾಗೆ ಸ್ನಾನಕ್ಕೆ ಹೋಗುವ ಮುನ್ನ ಲಕ್ಷ್ಮೀ ಮುಖದ ಮೇಲೆ ಏನೂ ಆಗಿರಲಿಲ್ಲ. ಯಾವುದೇ ಗಾಯದ ಗುರುತುಗಳೂ ಇರಲಿಲ್ಲ. ಸ್ನಾನದ ಗೃಹದಲ್ಲಿ ಬೆತ್ತಲಾಗಿ ಮಹಿಳೆ ಬಿದ್ದಿದ್ದು, ಮುಖದಲ್ಲಿ ಪರಚಿರುವ ಗಾಯಗಳಾಗಿವೆ. ಮನೆಗೆ ಬೇರೆ ಯಾರೂ ಬಂದಿರಲಿಲ್ಲ. ಗ್ಯಾಸ್ ಗೀಸರ್ ಕೂಡ ಆನ್ ಇರಲಿಲ್ಲ. ಬಕೆಟ್ ನಲ್ಲಿ ನೀರು ಸಹ ತುಂಬಿರಲಿಲ್ಲ. ಆದರೂ ಮಹಿಳೆ ಸ್ನಾನದ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು, ಅನುಮಾನಕ್ಕೆ ಕಾರಣವಾಗಿದೆ.
