2
Bhatkala: ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಜಾನುವಾರು ಕಳ್ಳರು ಗರ್ಭಿಣಿ ಗೋವನ್ನು ಕಡಿದು ಮಾಂಸ ಮಾಡಿದ್ದಲ್ಲದೇ ಅದರ ಬಾಲ ಹಾಗೂ ಹೊಟ್ಟೆಯಲ್ಲಿದ್ದ ಕರುವನ್ನು ಹೆಬಳೆಯ ಕುಕ್‌ನೀರ್ ಬಳಿ ವೆಂಕಟಾಪುರ ನದಿಯಂಚಿನಲ್ಲಿ ಎಸೆದು ಹೋಗಿರುವ ಘಟನೆ ನಡೆದಿದೆ.
ಪುಟ್ಟ ಕರುವನ್ನು ಗೋಣಿ ಚೀಲದಲ್ಲಿ ಸುತ್ತಿ ಬಿಸಾಡಲಾಗಿದೆ. ದನದ ಉದ್ದನೆಯ ಬಾಲ ಕೂಡಾ ಅಲ್ಲಿಯೇ ಪತ್ತೆಯಾಗಿದೆ. ಬೀದಿ ನಾಯಿ ಚೀಲವನ್ನು ಎಳೆಯುತ್ತಿರುವಾಗ ಸ್ಥಳೀಯರು ನೋಡಿ ಪೊಲೀಸರು ಮಾಹಿತಿ ನೀಡಿದ್ದಾರೆ.
ತನಿಖೆ ಮುಂದುವರಿದಿದೆ.
