Home » ಪಾಕ್ ಪರ ಬೇಹುಗಾರಿಕೆ ಮಾಡುತ್ತಿದ್ದ ಬಾಲಕ ವಶಕ್ಕೆ

ಪಾಕ್ ಪರ ಬೇಹುಗಾರಿಕೆ ಮಾಡುತ್ತಿದ್ದ ಬಾಲಕ ವಶಕ್ಕೆ

0 comments

ಚಂಡೀಗಢ: ಪಾಕಿಸ್ತಾನ ಪರವಾಗಿ ಗೂಢಾಚಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಪಂಜಾಬ್‌ನ ಪಠಾಣ್ ಕೋಟ್ ಪೊಲೀಸರು 15 ವರ್ಷದ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ಸಂಪರ್ಕದಲ್ಲಿದ್ದ ಬಾಲಕ, ಭಾರತದ ರಕ್ಷಣೆಗೆ ಸಂಬಂಧಿಸಿದ ವಿಷಯಗಳು, ಸೂಕ್ಷ್ಮ ಮಾಹಿತಿಯನ್ನು ವಿವಿಧ ಹಂತದ ಸಮೂಹ ಸಂವಹನ ವ್ಯವಸ್ಥೆ ಮೂಲಕ ರವಾನಿಸುತ್ತಿದ್ದ ಎಂದು ತಿಳಿದು ಬಂದಿದೆ. ಈ ಪ್ರಕರಣದ ಬೆನ್ನಿಗೆ ಮತ್ತಷ್ಟು ಅಪ್ರಾಪ್ತ ಮನಸುಗಳು ಪಾಕಿಸ್ತಾನದ ಐಎಸ್‌ಐ ವಿಷವ್ಯೂಹದಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಬಾಲಕರ ಅಸಹಜ ಅಥವಾ ಮಕ್ಕಳ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ಕಣ್ಣಿಡಲು ಸೂಚನೆ ನೀಡಲಾಗಿದೆ.

ಭಾರತದ ವಿರುದ್ಧ ಉಗ್ರ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತಿದ್ದ ಪಾಕಿಸ್ತಾನದ ಐಎಸ್‌ಐ, ಬೇಹುಗಾರಿಕೆ ಕೃತ್ಯಗಳಿಗೆ ಮಕ್ಕಳನ್ನು ನೇಮಕ ಮಾಡಿಕೊಳ್ಳುವ ಅಡ್ಡದಾರಿ ಹಿಡಿದಿದೆ. ಮಕ್ಕಳ ಮೇಲೆ ಯಾರಿಗೂ ಅನುಮಾನ ಬರುವುದಿಲ್ಲ. ಗುರಿ ಸಾಧನೆಗೆ ಮಕ್ಕಳನ್ನು ಸುಲಭವಾಗಿ ಬಳಸಿಕೊಳ್ಳಬಹುದು ಎಂಬುದು ಐಎಸ್‌ಐ ದುರುದ್ದೇಶವಾಗಿದೆ.

You may also like