Kolkata: ಇಲ್ಲೊಬ್ಬ ವ್ಯಕ್ತಿಯು ಅವನ ಅತ್ತಿಗೆಯ ಶಿರಚ್ಛೇದನ ಮಾಡಿ, ರುಂಡವನ್ನು ಊರೆಲ್ಲ ಹಿಡಿದು ಸುತ್ತಾಡಿ ಪೊಲೀಸ್ ಠಾಣೆಗೆ ಬಂದಿರುವ ಘಟನೆಯೊಂದು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಭರತ್‌ಗಢದ ಸತಿ ಮಂಡಲ್ ಮೃತ ದುರ್ದೈವಿಯಾಗಿದ್ದು, ಆಕೆಯ ಪತಿಯ ತಮ್ಮ ಬಿಮಲ್ ಮಂಡಲ್ ಕೊಲೆ ಆರೋಪಿಯಾಗಿದ್ದಾನೆ. ಬಿಮಲ್ ಮತ್ತು ಅತ್ತಿಗೆಯ ಜೊತೆ ಜಗಳವಾಡಿದ್ದು, ಇಬ್ಬರ ಜಗಳವು ಜೋರಾಗಿರುತ್ತದೆ. ಬಿಮಲ್ ಕುಡುಗೋಲಿನಿಂದ ಅತ್ತಿಗೆಯ ಶಿರಚ್ಛೇದನ ಮಾಡಿದ್ದು, ಬಳಿಕ ಈ ರುಂಡವನ್ನು ಹಿಡಿದು ರಸ್ತೆಯಲ್ಲಿ ನಡೆದುಕೊಂಡು ಬಂದಿದ್ದಾನೆ. ಬಳಿಕ ಕುಡುಗೋಲು ಹಾಗೂ ರುಂಡದ ಸಮೇತ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದು, ಆರೋಪಿ ಬಿಮಲ್ ಮಂಡಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ರುಂಡವನ್ನು ಹಿಡಿದು ರಸ್ತೆಯಲ್ಲಿ ಓಡಾಡಿದ ವ್ಯಕ್ತಿಯ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು,ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಬಸಂತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
