Home » Belluru: ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರ ಹಲ್ಲೆ ಪ್ರಕರಣ: ಬೆಳ್ಳೂರು ಪ್ರಕ್ಷುಬ್ಧ

Belluru: ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರ ಹಲ್ಲೆ ಪ್ರಕರಣ: ಬೆಳ್ಳೂರು ಪ್ರಕ್ಷುಬ್ಧ

0 comments
Belluru

Belluru: ಯುವಕನ ಮೇಲೆ ಗುಂಪೊಂದು ಗಂಭೀರವಾಗಿ ಹಲ್ಲೆ ಮಾಡಿದ್ದಲ್ಲದೆ, ಎರಡು ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿದೆ. ಜತೆಗೆ ಮಹಿಳೆಯರಿಗೆ ಬೆದರಿಕೆ ಹಾಕಿರುವ ಘಟನೆ ತಾಲೂಕಿನ ಬೆಳ್ಳೂರಿನಲ್ಲಿ ಸೋಮವಾರ ರಾತ್ರಿ ನಡೆದಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: Money Making Tips: ಹೆಣ್ಣು ಮಗು ಹೆತ್ತವರಿಗೆ ಸಿಹಿ ಸುದ್ದಿ!

ಬೆಳ್ಳೂರಿನಲ್ಲಿ ಸೋಮವಾರ ರಾತ್ರಿ ದೇವರ ಉತ್ಸವ ನಡೆಯುವಾಗ ಬೈಕ್ ನಲ್ಲಿ ವೀಲಿಂಗ್ ಮಾಡುತ್ತಿದ್ದ ಯುವಕರಿಗೆ ಬುದ್ಧಿವಾದ ಹೇಳಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಗುಂಪುಗೂಡಿ ಅಭಿಲಾಷ್ ಎಂಬುವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರೆ.

ಇದನ್ನೂ ಓದಿ: Kiccha Sudeep: ಕರ್ನಾಟಕ ಅಲ್ಲದೆ ‘ತುಳುನಾಡು’ ಅಂತ ಬೇರೆಯೇ ಇದೆಯೇ? ಕಿಚ್ಚ ಸುದೀಪ್ ಪ್ರಶ್ನೆ!!

ಆತನ ಹಾಗೂ ನಾಗೇಶ್ ಎಂಬುವವರ ಮನೆಗೆ ನುಗ್ಗಿ ಕಿಟಕಿ, ಗಾಜುಗಳನ್ನು ಪುಡಿ ಮಾಡಿದ್ದಲ್ಲದೆ ಮಹಿಳೆ ಯರಿಗೂ ಬೆದರಿಕೆ ಹಾಕಿದ್ದಾರೆ ಎಂದು ಬೆಳ್ಳೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಗಾಯಾಳು ಅಭಿಲಾಷ್‌ನನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂರು ಪ್ರತ್ಯೇಕ ಪ್ರಕರಣ ದಾಖಲು: ಗಾಯಾಳು ಅಭಿಲಾಷ್ ತಂದೆ ರಾಮು ಮತ್ತು ಅತ್ತೆ ರಶ್ಮಿ ಅವರು ಮಹಮ್ಮದ್ ಹುಜೈಫ್, ಇಮ್ರಾನ್, ಸೂಫಿಯಾನ್ ಸೇರಿ ಹಲವರ ವಿರುದ್ಧ ದೂರು ನೀಡಿದ್ದಾರೆ.

You may also like

Leave a Comment