4
Chikkamagaluru: ಪೊಲೀಸ್ ಜೀಪ್ ವೇಗವಾಗಿ ಹಿಂಭಾಗದಿಂದ ಡಿಕ್ಕಿ ಹೊಡೆದಿದ್ದು, ದ್ವಿಚಕ್ರವಾಹನ ಸವಾರ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಂಗಟಗೆರೆ ಪೊಲೀಸ್ ಠಾಣೆಯ ಜೀಪ್ ಚಾಲಕ ಶಿವಕುಮಾರ್‌ನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಕಡೂರು ಪಟ್ಟಣದ ಮಚ್ಚೇರಿ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಇದರಲ್ಲಿ ಗಂಗಾಧರ್ (49) ಎಂಬುವವರು ಸಾವಿಗೀಡಾಗಿದ್ದರು. ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿತ್ತು. ಪೊಲೀಸರಿಂದಲೇ ಹಿಟ್ ಆಂಡ್ ರನ್ ಮಾಡಲಾಗಿದೆ.
ಅಪಘಾತ ಆದಾಗ ಪೊಲೀಸ್ ಜೀಪ್ ನಿಲ್ಲಿಸದೇ ಶಿವಕುಮಾರ್ ಪರಾರಿಯಾಗಿದ್ದು, ಜೊತೆಗೆ ಜೀಪ್ ಚಾಲಕನ ನಿರ್ಲಕ್ಷ್ಯದ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಪೊಲೀಸರು ಚಾಲಕ ಶಿವಕುಮಾರ್ ಬಂಧನ ಮಾಡಿ ಜೀಪ್ ವಶಕ್ಕೆ ಪಡೆದಿದ್ದಾರೆ.
