Home » Chikkamagaluru: ಸಮವಸ್ತ್ರ ಧರಿಸದೇ ಶಾಲೆಗೆ ಹೋದರೆ ಬೈಯುತ್ತಾರೆಂಬ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

Chikkamagaluru: ಸಮವಸ್ತ್ರ ಧರಿಸದೇ ಶಾಲೆಗೆ ಹೋದರೆ ಬೈಯುತ್ತಾರೆಂಬ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

0 comments

Chikkamagaluru: ಸಮವಸ್ತ್ರ ಧರಿಸುವ ವಿಷಯಕ್ಕೆ ಚಿಕ್ಕಮಗಳೂರಿನ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆ ನಡೆದಿದೆ.

13 ವರ್ಷದ ನಿವೇದಿತಾ ಮೃತ ಬಾಲಕಿ.

ಸಮವಸ್ತ್ರ ಧರಿಸದೇ ಶಾಲೆಗೆ ಹೋದರೆ ಶಿಕ್ಷಕರು ಬೈಯುತ್ತಾರೆ ಎಂದು ಬಾಲಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿ ನಡೆದಿದೆ.

ವಿದ್ಯಾರ್ಥಿನಿಗೆ ಶಿಕ್ಷಕರು ಶಾಲಾ ಸಮವಸ್ತ್ರ ನೀಡಿದ್ದು, ಸೋಮವಾರದಿಂದ ಸಮವಸ್ತ್ರ ಧರಿಸಿ ಬರಲು ಹೇಳಿದ್ದರು. ಪೋಷಕರು ಸಮವಸ್ತ್ರ ಹೊಲಿಯಲು ಟೈಲರ್‌ಗೆ ನೀಡಿದ್ದರು. ಆದರೆ ಟೈಲರ್‌ ಸಮವಸ್ತ್ರ ಹೊಲಿದಿರದ ಕಾರಣ ಎಲ್ಲಿ ಶಾಲೆಗೆ ಸಮವಸ್ತ್ರ ಧರಿಸದೇ ಹೋದರೆ ಶಿಕ್ಷಕರು ಹೊಡೆಯುತ್ತಾರೆ ಎಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಲಿಂಗದಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

You may also like