Home » Crime: 1 ಕೊಟಿ ರೂಪಾಯಿಯೊಂದಿಗೆ ಮಗಳು, ಪ್ರಿಯಕರನ ಜೊತೆ ಎಸ್ಕೇಪ್

Crime: 1 ಕೊಟಿ ರೂಪಾಯಿಯೊಂದಿಗೆ ಮಗಳು, ಪ್ರಿಯಕರನ ಜೊತೆ ಎಸ್ಕೇಪ್

1 comment
Crime

Crime: ಮನೆಯ ಲಾಕರ್‌ನಲ್ಲಿಟ್ಟಿದ್ದ ಒಂದು ಕೋಟಿ ರೂ. ಕಳವು ಮಾಡಿರುವ ಪುತ್ರಿ ಪ್ರಿಯಕರನ ಜತೆ ಪರಾರಿಯಾಗಿದ್ದಾಳೆ ಎಂದು ಆರೋಪಿಸಿ ತಂದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ: Health Care: ಯಾವುದೇ ಕಾರಣಕ್ಕೂ ಈ ಪದಾರ್ಥಗಳನ್ನು ರಾತ್ರಿಯಿಡೀ ಫ್ರಿಡ್ಜ್ ನಲ್ಲಿ ಇಡಬೇಡಿ, ಇಲ್ಲಿದೆ ನೋಡಿ ಟಿಪ್ಸ್

ಈ ಕುರಿತು ಬಟ್ಟೆ ವ್ಯಾಪಾರಿ ಮನೋಹ‌ರ್ (ಹೆಸರು ಬದಲಿಸಲಾಗಿದೆ) ನೀಡಿರುವ ದೂರು ಆಧರಿಸಿ 19 ವರ್ಷದ ಅವರ ಮಗಳು, ಪ್ರಿಯಕರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಕಾಟನ್‌ಪೇಟೆ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Mumbai Dust Storm: ಮುಂಬಯಿನಲ್ಲಿ ಮಳೆ, ಗಾಳಿಗೆ ಉರುಳಿದ ಬೃಹತ್ ಹೋರ್ಡಿಂಗ್, 8 ಸಾವು

ಮನೋಹರ್ ಪುತ್ರಿ ಏ.21ರಂದು ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡುವೆಯೇ ಆಕೆ, ತಾನು ಪ್ರೀತಿಸುತ್ತಿದ್ದ ಗೆಳೆಯನ ಜತೆ ಮದುವೆಯಾಗಿರುವ ವಿಚಾರ ಗೊತ್ತಾಗಿತ್ತು. ಜತೆಗೆ, ಆಕೆ ಪ್ರಾಪ್ತ ವಯಸ್ಕಳಾಗಿದ್ದರಿಂದ ಸಂಗಾತಿಯ ಆಯ್ಕೆ ಹಕ್ಕು ಹೊಂದಿದ್ದಾಳೆ ಎಂದು ಪೊಲೀಸರು ಮನೋಹರ್‌ಗೆ ತಿಳಿಸಿದ್ದರು.

ಮನೆಗೆ ಹೋಗಲು ಒಪ್ಪದ ಆಕೆ ಕೂಡ ಗಂಡನ ಜತೆ ಇರುವುದಾಗಿ ತಿಳಿಸಿ ತಂದೆಯ ಆಸ್ತಿ ಹಕ್ಕು ಪ್ರತಿಪಾದಿಸುವುದಿಲ್ಲ ಎಂದು ಒಪ್ಪಿಕೊಂಡಿದ್ದಳು. ಇತ್ತೀಚೆಗೆ ಮನೋಹರ್ ತಾಯಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ, ಇಡೀ ಕುಟುಂಬ ತಮಿಳುನಾಡಿನ ಸ್ವಂತ ಊರಿಗೆ ತೆರಳಿ ಸ್ವಲ್ಪ ದಿನ ಇದ್ದು ಬರಲು ತೀರ್ಮಾನಿಸಿದ್ದರು.

ಈ ವೇಳೆ ಲಾಕರ್ ಪರಿಶೀಲಿಸಿದಾಗ ಒಂದು ಕೋಟಿ ನಗದು ಕಳವಾಗಿರುವುದು ಗೊತ್ತಾಗಿತ್ತು. “ಮಗಳೇ ಗೆಳೆಯನ ಸಹಾಯದೊಂದಿಗೆ 1 ಕೋಟಿ ರೂ. ಕಳವು ಮಾಡಿಕೊಂಡು ತೆರಳಿದ್ದಾಳೆ.'” ಎಂದು ಆರೋಪಿಸಿ ಮನೋಹರ್ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವ್ಯಾಪಾರದಲ್ಲಿ ಸಂಪಾದನೆ ಮಾಡಿದ್ದ 1 ಕೋಟಿ ರೂ.ಗಳಿಗೂ ದಾಖಲೆಗಳಿವೆ. ಜತೆಗೆ, ಕಟ್ಟಡ ಸಂಬಂಧಿತ ವ್ಯವಹಾರಕ್ಕೆಂದು ನಗದನ್ನು ಮನೆಯಲ್ಲಿ ಇಟ್ಟುಕೊಂಡಿದ್ದೆ ಎಂದು ಮನೋಹರ್ ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

You may also like

Leave a Comment