Home » Crime News: ಪ್ಯಾಸೆಂಜರ್ ನನ್ನು ಕೊಲೆಗೈದ ಆಟೋ ಚಾಲಕ : ಬೆಂಗಳೂರು ಪೊಲೀಸರಿಂದ ಆಟೋ ಚಾಲಕನ ಬಂಧನ 

Crime News: ಪ್ಯಾಸೆಂಜರ್ ನನ್ನು ಕೊಲೆಗೈದ ಆಟೋ ಚಾಲಕ : ಬೆಂಗಳೂರು ಪೊಲೀಸರಿಂದ ಆಟೋ ಚಾಲಕನ ಬಂಧನ 

1 comment

ಬೆಂಗಳೂರಿನ ಶಾಂತಿನಗರ ಪ್ರದೇಶದಲ್ಲಿ ಮಹಿಳೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬೆಂಗಳೂರು ಪೊಲೀಸರು ಆಟೋ ಚಾಲಕನನ್ನು ಬಂಧಿಸಿದ್ದಾರೆ. ಫೆಬ್ರವರಿ 28ರ ರಾತ್ರಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: PM Modi: ಪ್ರಧಾನಿ ಮೋದಿ ಹಿಂದೂ ಅಲ್ಲ !! ಅರೆ ಏನಿದು ಶಾಕಿಂಗ್ ನ್ಯೂಸ್?

ವರದಿಯ ಪ್ರಕಾರ, 38 ವರ್ಷದ ಆರೋಪಿ ಮುಬಾರಕ್ ಖಾನ್, ಸಂತ್ರಸ್ತೆಯನ್ನು ಆಕೆಯ ಒಪ್ಪಿಗೆಯೊಂದಿಗೆ ತನ್ನ ಆಟೊದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಕರೆದೊಯ್ದು. ಮುಬಾರಕ್ ಆಕೆಯ ಮೇಲೆ ಬಲವಂತವಾಗಿ ಅತ್ಯಚಾರ ಮಾಡಲು ಮುಂದಾಗಿದ್ದು, ಅದನ್ನು ಆ ಮಹಿಳೆ ವಿರೋಧಿಸಿದ್ದಾಳೆ. ಆದಾಗ್ಯೂ, ಆತ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವನ್ನು ಮುಂದುವರಿಸಿದ್ದಾನೆ. ಆಕೆ ಪೊಲೀಸರ ಬಳಿಗೆ ಹೋಗುವುದಾಗಿ ಹೇಳಿದಾಗ, ಆಕೆಯನ್ನು ಕಟ್ಟಡದ ಮೊದಲ ಮಹಡಿಯಿಂದ ತಳ್ಳಿ ಸಾಯಿಸಿದ್ದಾನೆ

ಈ ಪ್ರಕರಣದ ಕುರಿತು ಮಾಹಿತಿ ನೀಡಿರುವಪೊಲೀಸ್ ಅಧಿಕಾರಿಯೊಬ್ಬರು, “ಆರೋಪಿಗೆ ಆಕೆಯ ಬಗ್ಗೆ ಯಾವುದೇ ವಿವರಗಳು ತಿಳಿದಿಲ್ಲ. ಅವನು ಆಕೆಯನ್ನು ಎಲ್ಲಾ ಒಪ್ಪಿಗೆಯೊಂದಿಗೆ ಕರೆದೊಯ್ದಿದ್ದಾನೆ ಎಂದು ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.

ದಾರಿಹೋಕರು ಬೆಳಿಗ್ಗೆ 11 ಗಂಟೆಗೆ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿದಾಗ, ಆಕೆಯ ತಲೆಯ ಮೇಲೆ ಗಾಯಗಳಾಗಿರುವುದು ಕಂಡು ಬಂದಿದೆ. ನಂತರ ವೈದ್ಯಕೀಯ ಪರೀಕ್ಷೆಯು ಆಕೆಯ ತಲೆಗೆ ಪೆಟ್ಟು ಬಿದ್ದು ಮೃತ ಪಟ್ಟಿರುವುದಾಗಿ ದೃಢಪಡಿಸಿದೆ.

ಆರೋಪಿಯು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಐಪಿಸಿ ಸೆಕ್ಷನ್ 376 (ಶಿಕ್ಷೆ) ಮತ್ತು 307 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

You may also like

Leave a Comment