Bantwala: ಬಂಟ್ವಾಳ: ಬಜರಂಗದಳದ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಹಾಗೂ ತಾಲೂಕು ಸಂಯೋಜಕ ರಕ್ಷಿತ್ ಬುಡೋ ಳಿಯವರಿಗೆ ಸೌದಿ ಅರೇಬಿಯಾ, ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನದ ಮೊಬೈಲ್ ನಂಬರ್ ಗಳಿಂದ ಕೊಲೆ ಬೆದರಿಕೆಯೊಡ್ಡಿ ಸರಣಿ ವಾಟ್ಸಪ್ ಸಂದೇಶಗಳು ಮೊನ್ನೆ ದಿನಾಂಕ 28.06.2025ರಂದು ಬಂದ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ತಾಲೂಕಿನ ಬುಡೋಳಿಯ ದಂಡೆಗೋಳಿ ನಿವಾಸಿ, ಮಡಂತ್ಯಾರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದಲ್ಲಿ ಉದ್ಯೋಗದಲ್ಲಿದ್ದು ಬಜರಂಗದಳದ ತಾಲೂಕು ಕಾರ್ಯನಿರ್ವಾಹಕರಾಗಿರುವ ರಕ್ಷಿತ್ ಎಂಬವರ ಮೊಬೈಲಿಗೆ ಕಳೆದ ದಿನಾಂಕ 28ರ ಮಧ್ಯಾಹ್ನ 12:30 ಮತ್ತು ಸಂಜೆ 5.10 ಹಾಗೂ 5. 26ಕ್ಕೆ ಸರಣಿಯಾಗಿ ಸೌದಿ ಅರೇಬಿಯಾ ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನಗಳ ಮೊಬೈಲ್ ನಂಬರ್ ಗಳಿಂದ ಜೈಷೆ ಮುಜಾಹಿದ್ದೀನ್ ಸಂಘಟನೆ ಹೆಸರಲ್ಲಿ ಭಜರಂಗದಳದ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಹಾಗೂ ತಾಲೂಕು ಕಾರ್ಯನಿರ್ವಾಹಕ ರಕ್ಷಿತ್ ಬುಡೋಳಿಯವರನ್ನು ಕೊಲೆಗೆಯ್ಯುವುದಾಗಿ ಬೆದರಿಕೆಯೊಡ್ಡಿ ವಾಟ್ಸಾಪ್ ಸಂದೇಶಗಳು ಬಂದಿರುವುದಾಗಿ ರಕ್ಷಿತ್ ಬುಡೋಳಿ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ವಾಟ್ಸಪ್ ಸಂದೇಶದಲ್ಲಿ “ಮುಜಾಹಿದ್ದೀನ್ ಗಳ ಗುರಿ ಎಂದೂ ತಪ್ಪುವುದಿಲ್ಲ, ನಮ್ಮ ಮುಸ್ಲಿಂ ಸಹೋದರನ ಕೊಲೆಯಲ್ಲಿ ಭಾಗಿಯಾಗಿರುವ ನಿನ್ನನ್ನು ಮತ್ತು ನರಸಿಂಹಮಾಣಿ ಹಾಗೂ ಇತರೆಲ್ಲರ ಹೆಸರುಗಳು ನಮ್ಮ ಪಟ್ಟಿ ಸೇರಿವೆ. ನಾವು ದೂರವಿಲ್ಲ ,ನಿಮ್ಮ ಮನೆ ತಲುಪಿದ್ದೇವೆ. ಈಗ ನರಸಿಂಹ ಮಾಣಿಯ ಕ್ಷಣಗಣನೆ ಆರಂಭವಾಗಿದೆ. ಸತ್ತ ಸುಹಾಷ್ ಶೆಟ್ಟಿಯಂತೆ ನಾವು ನಿಮ್ಮಿಬ್ಬರನ್ನು ಕೊಲ್ಲುತ್ತೇವೆ. ಎಂದು ಮುಂತಾಗಿ ವಾಟ್ಸಾಪ್ ಆಡಿಯೋ ಮೂಲಕ ಬೆದರಿಕೆ ಯೊಡ್ಡಲಾಗಿದೆ. ಹೀಗಾಗಿ ರಕ್ಷಿತ್ ಬುಡೋಳಿಯವರು ಈ ವಾಟ್ಸಾಪ್ ಸಂದೇಶ ಸಹಿತ ದೂರನ್ನು ಬಂಟ್ವಾಳ ಗ್ರಾಮಾಂತರ ಠಾಣೆಗೆ ನೀಡಿದ್ದಾರೆ.
ಈ ನಡುವೆ ಭಾರಿ ಆತಂಕಕ್ಕೆ ಕಾರಣವಾದ ಸಂಗತಿ ಏನೆಂದರೆ ಬಂಟ್ವಾಳದ ಹಿಂದೂ ಮುಖಂಡರ ನಿರ್ದಿಷ್ಟವಾದ ಹೆಸರು ಮತ್ತು ಮೊಬೈಲ್ ನಂಬರ್ ಗಳು ಸೌದಿ ಅರೇಬಿಯಾ,ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಜೈಶೇ ಮುಜಾಹಿದ್ದೀನ್ ಸಂಘಟನೆಯ ಉಗ್ರಗಾಮಿಗಳಿಗೆ ಸಿಕ್ಕಿದೆಯೆ೦ದರೆ, ಈ ವಿದೇಶಿ ಉಗ್ರರೊಂದಿಗೆ ಬಂಟ್ವಾಳ, ಮಂಗಳೂರು ಪರಿಸರದ ಸ್ಥಳೀಯ ಉಗ್ರರು ನಿರಂತರ ಸಂಪರ್ಕ ಹೊಂದಿ ಸ್ಲೀಪರ್ ಸೆಲ್ ಗಳಂತೆ ಕೆಲಸ ಮಾಡುತ್ತಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಹೀಗಾಗಿ ಈ ಒಂದು ಪ್ರಕರಣವನ್ನು ಬಂಟ್ವಾಳ ಪೊಲೀಸ್ ಠಾಣೆ ಸೇರಿದಂತೆ ಜಿಲ್ಲೆ,ರಾಜ್ಯ ಹಾಗೂ ದೇಶದ ಎಲ್ಲಾ ಸಂಬಂಧಪಟ್ಟ ಇಲಾಖೆಗಳೂ ಗಂಭೀರವಾಗಿ ಪರಿಗಣಿಸಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದೇ ಹೋದಲ್ಲಿ ಮುಂದೊಂದು ದಿನ ಪರಿಸ್ಥಿತಿ ಕೈಮೀರುವ ಸಾಧ್ಯತೆಗಳಿರುವುದಂತೂ ಸ್ಪಷ್ಟ ಎನ್ನಲಾಗುತ್ತಿದೆ.
