Home » Nelyadi: ನೆಲ್ಯಾಡಿ; ಯುವಕನ ಬರ್ಬರ ಕೊಲೆ!

Nelyadi: ನೆಲ್ಯಾಡಿ; ಯುವಕನ ಬರ್ಬರ ಕೊಲೆ!

0 comments

Nelyadi: ನೆಲ್ಯಾಡಿ ಸಮೀಪದ ಮಾದೇರಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಯುವಕನೋರ್ವನನ್ನು ಹತ್ಯೆ ಮಾಡಲಾಗಿರುವ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ಶರತ್‌ (35) ಎಂದು ಗುರುತಿಸಲಾಗಿದೆ. ಮೃತ ಶರತ್‌ನ ಚಿಕ್ಕಪ್ಪನ ಮನೆಯ ಅಂಗಳದಲ್ಲಿಯೇ ಈ ಘಟನೆ ನಡೆದಿದೆ. ಚಾಕು ಮೃತ ವ್ಯಕ್ತಿ ಬಳಿ ಇರುವುದು ಪತ್ತೆಯಾಗಿದೆ. ಉಪ್ಪಿನಂಗಡಿ ಮಾಹಿತಿ ತಿಳಿದ ಕೂಡಲೇ ಪೊಲೀಸ್‌ ಠಾಣೆಯ ಅಧಿಕಾರಿಗಳು ಹಾಗೂ ನೆಲ್ಯಾಡಿ ಹೊರಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹತ್ಯೆಗೆ ಕೌಟುಂಬಿಕ ಕಾರಣ ಎನ್ನಲಾಗುತ್ತಿದೆ.  ಆರೋಪಿಗಳ ಕುರಿತು ಮಾಹಿತಿ ಇಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

You may also like