9
Dandeli: ಕೋಗಿಲಬನದಲ್ಲಿ ಮೃತಪಟ್ಟ ಆಕಳಿನ ಮೃತದೇಹವನ್ನು ಟ್ರ್ಯಾಕ್ಟರ್‌ಗೆ ಕಟ್ಟಿ ಎಳೆದೊಯ್ದಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟ್ರ್ಯಾಕ್ಟರಿನ ಹಿಂಬದಿಗೆ ಮೃತ ಆಕಳಿನ ದೇಹವನ್ನು ಹಗ್ಗದಲ್ಲಿ ಕಟ್ಟಿ ಎಳೆದೊಯ್ಯಲಾಗಿದೆ. ನೆಟ್ಟಿಗರು ಇದನ್ನು ನೋಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಾಲಕನ ಕೃತ್ಯಕ್ಕೆ ಜನರು ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.
