Home » Darshan Treat: ದರ್ಶನ್ ರಾಜಾತಿಥ್ಯ ಪ್ರಕರಣ: ಸರ್ಕಾರಕ್ಕೆ ತೀವ್ರ ಮುಜುಗರ: ಗೃಹ ಸಚಿವ ಜೈಲಿಗೆ ದೌಡು

Darshan Treat: ದರ್ಶನ್ ರಾಜಾತಿಥ್ಯ ಪ್ರಕರಣ: ಸರ್ಕಾರಕ್ಕೆ ತೀವ್ರ ಮುಜುಗರ: ಗೃಹ ಸಚಿವ ಜೈಲಿಗೆ ದೌಡು

5 comments
Darshan Treat

Darshan Treat: ಪರಪ್ಪನ‌ ಅಗ್ರಹಾರ ಜೈಲಿನಲ್ಲಿ(Parappan Agrahara Jail) ನಟ ದರ್ಶನ್(Actor Darshan) ಮತ್ತಿತರರಿಗೆ ರಾಜಾತಿಥ್ಯ ಒದಗಿಸುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ(CM siddaramayaih) ಅವರು ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಸೂಚಿಸಿದ್ದಾರೆ. ಈ ಮಧ್ಯೆ ಪರಪ್ಪನ ಅಗ್ರಹಾರ ಜೈಲಿಗೆ ಇದೀಗ ಗೃಹ ಸಚಿವ(Home Minister) ಜಿ. ಪರಮೇಶ್ವರ್(G Parameshwar) ಭೇಟಿ ನೀಡಲು ದೌಡಾಯಿಸಿದ್ದಾರೆ. ದರ್ಶನ್ ರಾಜಾತಿಥ್ಯ ಪ್ರಕರಣದಿಂದ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದ್ದು, ವಿಧಾನಸೌಧದಿಂದ ಪರಪ್ಪನ ಅಗ್ರಹಾರಕ್ಕೆ ನೇರ ಪರಮೇಶ್ವರ್ ತೆರಳಿದ್ದಾರೆ.

ದರ್ಶನ್ ಮತ್ತು ಇತರರನ್ನು ಕೂಡಲೇ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡುವಂತೆ ಸಿಎಂ ತಾಕೀತು ಮಾಡಿದ್ದಾರೆ. ಕಾರಾಗೃಹಕ್ಕೆ ಭೇಟಿ ನೀಡಿ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸಿಎಂ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

You may also like

Leave a Comment