Home » Death News:ಕುಟುಂಬಸ್ಥರ ಜತೆ ಪ್ರವಾಸ ಕೈಗೊಂಡಿದ್ದ ಮಹಿಳೆ ರೈಲಿನಿಂದ ಬಿದ್ದು ಸಾವು

Death News:ಕುಟುಂಬಸ್ಥರ ಜತೆ ಪ್ರವಾಸ ಕೈಗೊಂಡಿದ್ದ ಮಹಿಳೆ ರೈಲಿನಿಂದ ಬಿದ್ದು ಸಾವು

by Praveen Chennavara
1 comment
Death News

Death News: ಕುಟುಂಬಸ್ಥರ ಜತೆ ತಮಿಳುನಾಡು ಪ್ರವಾಸ ಕೈಗೊಂಡಿದ್ದ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಮಹಿಳೆಯೊಬ್ಬರು ರೈಲಿನಿಂದ ಕಾಲುಜಾರಿ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಇದನ್ನೂ ಓದಿ: Rules Change: ಜೂನ್ ತಿಂಗಳು ಬರ್ತಾ ಇದೆ! ಡ್ರೈವಿಂಗ್ ಲೈಸೆನ್ಸ್ ಇಂದ ಹಿಡಿದು ಆಧಾರ್ ಕಾರ್ಡ್, ಸಿಲಿಂಡರ್ ವರೆಗೆ ಎಲ್ಲಾ ರೂಲ್ಸ್ ಚೇಂಜ್

ಹೊಳಲ್ಕೆರೆ ಪಟ್ಟಣದ ಒಂದನೇ ವಾರ್ಡ್‌ ಮುಷ್ಟಿಗರ ಹಟ್ಟಿಯ ರೈತ ಮುಖಂಡ ಕುಮಾರ್‌ ಆಚಾರ್‌ ಅವರ ಧರ್ಮಪತ್ನಿ ನಿರ್ಮಲಮ್ಮ (55) ಮೃತ ಮಹಿಳೆ.

ಇದನ್ನೂ ಓದಿ: LPG connection: ಎಲ್ಪಿಜಿ ಸಿಲಿಂಡರ್ ಸಬ್ಸಿಡಿ 300 ರೂ ಸಿಗ್ಬೇಕಾ? ಹಾಗಿದ್ರೆ ಜೂನ್ 1 ರೊಳಗೆ ಈ ಕೆಲಸ ಮಾಡಿ!

ಮೃತ ನಿರ್ಮಲಮ್ಮ ಅವರು ಕುಟುಂಬಸ್ಥರಾದ 50 ಜನರ ತಂಡ ತಮಿಳುನಾಡು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಪ್ರವಾಸ ಕೈಗೊಂಡಿದ್ದರು. ಪ್ರವಾಸ ಮುಗಿಸಿ ವಾಪಸ್‌ ಬರುವಾಗ ತಮಿಳುನಾಡಿನ ಮಧುರೈ ಮಾರ್ಗದಲ್ಲಿ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ತಡರಾತ್ರಿ ಮೂತ್ರ ವಿಸರ್ಜನೆಗೆ ಶೌಚಾಲಯಕ್ಕೆ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬೋಗಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಈ ಘಟನೆ ತಮಿಳುನಾಡಿನ ಮಧುರೈ ಮಾರ್ಗದ ಧರ್ಮಪುರಿ ಸಮಿಪದ ಟೋನೂರು ಹತ್ತಿರ ಸಂಭವಿಸಿದೆ.

ಜತೆಯಲ್ಲಿದ್ದ ಪತಿ ಕುಮಾರ್‌ ಆಚಾರ್ ಮುಂದಿನ ರೈಲ್ವೆ ನಿಲ್ದಾಣದಲ್ಲಿ ನಿದ್ದೆಯಿಂದ ಎಚ್ಚರಗೊಂಡಾಗ ಪತ್ನಿ ಕಾಣಿಸಲಿಲ್ಲ ಎಂದು ಗಾಬರಿಗೊಂಡು ಬೋಗಿ ಪರಿಶೀಲಿಸಿದಾಗ ಅವರ ಚಪ್ಪಲ್ಲಿ ಮತ್ತು ಫೋನ್‌ ಬೋಗಿಯ ಶೌಚಾಲಯದ ಹತ್ತಿರ ಬಿದ್ದಿರುವುದನ್ನು ನೋಡಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಅದೇ ನಿಲ್ದಾಣದಲ್ಲಿ ಇಳಿದ ಕುಮಾರ್‌ ಆಚಾರ್‌ ಹಾಗೂ ಬಂಧುಗಳು ಹತ್ತಿರದ ಧರ್ಮಪುರಿ ಪೊಲೀಸ್‌ ಠಾಣೆಗೆ ದೂರು ನೀಡಿದಾಗ ಪೊಲೀಸ್‌ ಜತೆ ರೈಲ್ವೆ ಹಳಿ ಪರಿಶೀಲಿಸಿದಾಗ ಟೋನೂರು ಎಂಬಲ್ಲಿ ನಿರ್ಮಲಮ್ಮ ಶವವಾಗಿ ಪತ್ತೆಯಾಗಿದ್ದಾರೆ.

ಈ ಕುರಿತು ಧರ್ಮಪುರಿ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.

You may also like

Leave a Comment