Home » Deepika death case: ಶಾಲಾ ಶಿಕ್ಷಕಿ, ಸೋಷಿಯಲ್ ಮೀಡಿಯಾ ಸ್ಟಾರ್ ದೀಪಿಕಾ ಸಾವಿಗೆ ರೋಚಕ ಟ್ವಿಸ್ಟ್ !!

Deepika death case: ಶಾಲಾ ಶಿಕ್ಷಕಿ, ಸೋಷಿಯಲ್ ಮೀಡಿಯಾ ಸ್ಟಾರ್ ದೀಪಿಕಾ ಸಾವಿಗೆ ರೋಚಕ ಟ್ವಿಸ್ಟ್ !!

0 comments
Deepika death case

Deepika death case: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮಾಣಿಕ್ಯಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಶಿಕ್ಷಕಿ (Teacher) ದೀಪಿಕಾ ಸಾವಿಗೆ(Deepika Death case) ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಹೌದು, ರೀಲ್ಸ್‌ ಮಾಡಿಕೊಂಡು ಸೋಶಿಯಲ್‌ ಮೀಡಿಯಾದಲ್ಲಿ (Social Media) ಫುಲ್‌ ಆಕ್ಟೀವ್‌ ಆಗಿದ್ದ ಶಿಕ್ಷಕಿ ಇದ್ದಕ್ಕಿದ್ದಂತೆ ಶವವಾಗಿ ಪತ್ತೆಯಾಗಿದ್ದು, ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು. ಇದಕ್ಕೀಗ ಹೊಸ ಟ್ವಿಸ್ಟ್ ಸಿಕ್ಕಿದ್ದು ಪರಿಚಯಸ್ಥ ಹುಡುಗನಿಂದಲೇ ದೀಪಿಕಾಳ ಕೊಲೆಯಾಗಿದೆ ಎಂಬ ಸತ್ಯ ಬಯಲಾಗಿದೆ.

ಇದನ್ನೂ ಓದಿ: Hiremagaluru kannan: ರಾಮನ ಪೂಜಿಸೋ ‘ಕನ್ನಡದ ಪೂಜಾರಿ’ ಹಿರೇಮಗಳೂರು ಕಣ್ಣನ್ ಶಾಕ್ ರಾಜ್ಯ ಕೊಟ್ಟ ಸರ್ಕಾರ !! ಏನಿದು ಸರ್ಕಾರದ ವಿಚಿತ್ರ ನಡೆ ?!

ದೀಪಿಕಾಳ ಪರಿಚಯಸ್ಥನಾದ ನಿತೀಶ್(22) ಎಂಬುವವನು ದೀಪಿಕಾಳ ಜೊತೆ ಅಕ್ಕ, ಅಕ್ಕ ಎಂದು ಓಡಾಡುತ್ತಿದ್ದನು. ಅಕ್ಕ-ತಮ್ಮನಂತೆ ಇಬ್ಬರೂ ಒಟ್ಟಿಗೇ ಇರುತ್ತಿದ್ದರು. ಅಲ್ಲದೆ ದೀಪಿಕಾಳ ಹತ್ಯೆಗೂ ಮುನ್ನ ಕೊನೆಯದಾಗಿ ಈತನೆ ಕರೆ ಮಾಡಿದ್ದಾನೆ. ದೀಪಿಕಾಳ ಮೃತದೇಹ ಸಿಗುತ್ತಿದ್ದಂತೆ ಆತ ಗ್ರಾಮದಿಂದ ಎಸ್ಕೇಪ್ ಆಗಿದ್ದಾನೆ.

ವಿಚಿತ್ರ ಅಂದರೆ ಕೊಲೆಯಾಗುವ ಮೊದಲು ಬೆಟ್ಟದಲ್ಲಿ ದೀಪಿಕಾ, ನಿತೀಶ್ ಇಬ್ಬರೂ ಜಗಳ ಮಾಡಿದ್ದಾರೆ. ಅಲ್ಲಿಗೆ ಬಂದಿದ್ದ ಪ್ರವಾಸಿಗರ ಮೊಬೈಲ್ ನಲ್ಲಿ 13 ಸೆಕೆಂಡ್ ಗಳ ವಿಡಿಯೋ ಒಂದು ರೆಕಾರ್ಡಿಂಗ್ ಆಗಿದೆ. ಇದನ್ನು ಅವರು ಪೋಲೀಸರಿಗೆ ನೀಡಿದ್ದಾರೆ.

ಏನಿದು ಘಟನೆ?

ಶಾಲೆಗೆ ಹೋಗಿಬರುತ್ತೇನೆ ಎಂದು ಹೇಳಿಹೋಗಿದ್ದ ಮಹಿಳೆಯೊಬ್ಬರು (Women) (ಶಿಕ್ಷಕಿಯೂ ಹೌದು) ಮೂರೇ ದಿನಗಳಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಮೇಲುಕೋಟೆಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ದೀಪಿಕಾ (28) ಎಂದು ಗುರುತಿಸಲಾಗಿದೆ.

You may also like

Leave a Comment