Home » Delhi: ಬಿಕನಿ ತೊಟ್ಟು ಬಸ್ಸಿನಲ್ಲಿ ಪುರುಷರೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವತಿ – ವಿಡಿಯೋ ವೈರಲ್

Delhi: ಬಿಕನಿ ತೊಟ್ಟು ಬಸ್ಸಿನಲ್ಲಿ ಪುರುಷರೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವತಿ – ವಿಡಿಯೋ ವೈರಲ್

5 comments
Delhi

Delhi: ಇಂದು ಹೆಚ್ಚಿನ ಯುವ ಜನತೆಗೆ ತಾವು ಫೇಮಸ್ ಆಗಬೇಕೆಂಬ ಗೀಳು ತುಂಬಾ ಹಿಡಿದಿದೆ. ಇದಕ್ಕಾಗಿ ಅವರು ಏನು ಬೇಕಾದರೂ ಮಾಡಲು ಮುಂದಾಗುತ್ತಾರೆ. ತಮ್ಮ ಮರ್ಯಾದೆಯನ್ನೂ ಲೆಕ್ಕಕ್ಕಿಡುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕೆಲವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವ ವಿಡಿಯೋ ಕಂಡರೆ ಶಾಕ್ ಆಗುತ್ತೆ. ಅಂತೆಯೆ ಇದೀಗ ಈ ಕುರಿತಂತೆ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಹುಡುಗಿಯೊಬ್ಬಳು ಬಿಕನಿ ತೊಟ್ಟು ಬಸ್ಸಿನಲ್ಲಿ ಪುರುಷರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾಳೆ.

ಇದನ್ನೂ ಓದಿ: Bad Habbit: ತಿಂದ ತಕ್ಷಣ ನಿದ್ದೆ ಬರುತ್ತಾ? ಸಖತ್ ಡೇಂಜರ್ ಇದು!

https://x.com/DELHIBUSES1/status/1780626014235979885?t=L1MqxyWcUCm7yeCcejwubQ&s=08

ಹೌದು, ಇಷ್ಟು ದಿನ ಮೆಟ್ರೋ(Metro) , ರೈಲು(Train), ಬಸ್ಸುಗಳಲ್ಲಿ ಪುರುಷರು ಅಸಭ್ಯವಾಗಿ ವರ್ತಿಸಿ ಸುದ್ದಿಯಾಗುತ್ತಿದ್ದರು. ಇದೀಗ ಹುಡುಗಿಯರೂ ಈ ಸಾಲಿಗೆ ಸೇರುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬಿಕಿನಿ ಧರಿಸಿ ಬಸ್ ಏರಿದ ಮಹಿಳೆಯೊಬ್ಬಳು ಪುರುಷರತ್ತ ಅಸಭ್ಯವಾಗಿ ಸನ್ನೆ ಮಾಡಿ ಕಿರುಕುಳ ನೀಡಿದ ಘಟನೆ ರಾಷ್ಟ್ರ ರಾಜಧಾನಿಯ ದೆಹಲಿಯ(Delhi) ಜೀವನಾಡಿ ಆಗಿರುವ ಡಿಟಿಸಿ ಬಸ್‌ನಲ್ಲಿ ನಡೆದಿದೆ.

ಇದನ್ನೂ ಓದಿ: WhatsApp ಅಕೌಂಟ್ ಬ್ಯಾನ್ ಆದರೆ ರಿಕವರಿ ಹೇಗೆ ಮಾಡಬೇಕು ಗೊತ್ತಾ ? : ಹೀಗೆ ಮಾಡಿ ಖಂಡಿತ ಅಕೌಂಟ್ ರಿಕವರ್ ಆಗುತ್ತೆ

ಅಂದಹಾಗೆ ಮಹಿಳೆ ಬಿಕಿನಿ ಧರಿಸಿ ಪ್ರಯಾಣಿಕರಿಂದ ತುಂಬಿದ್ದ ಬಸ್ ಏರಿದ್ದು ಪ್ರಯಾಣಿಕಲು ಈಕೆಯನ್ನು ನೋಡಿ ಬೆಚ್ಚಿದ್ದಾರೆ. ಬಿಕಿನಿ ಧರಿಸಿ ಬಸ್ ಏರಿದ ಮಹಿಳೆ ಪುರುಷ ಪ್ರಯಾಣಿಕರತ್ತ ಅಶ್ಲೀಲವಾಗಿ ಸನ್ನೆ ಮಾಡಿ ಅಸಭ್ಯವಾಗಿ ವರ್ತಿಸಿರುವ ದೃಶ್ಯ ವೀಡಿಯೋದಲ್ಲಿ ಸೆರೆ ಆಗಿದೆ. ಈಕೆಯ ಅಸಭ್ಯ ವರ್ತನೆ ನೋಡಿದ ಪುರುಷ ಪ್ರಯಾಣಿಕರು ತಾವು ಕುಳಿತಿದ್ದ ಸೀಟಿನಿಂದ ಎದ್ದು ಹೋಗಿ ಬಸ್‌ನ ಮುಂಭಾಗದಲ್ಲಿ ಬಂದು ನಿಂತಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯ ವರ್ತನೆಗೆ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟೇ ಅಲ್ಲದೆ ಈ ಬಿಕನಿ ಮಹಿಳೆ ಬಸ್ ಏರುತ್ತಿದ್ದಂತೆ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದಾಳೆ. ಅಲ್ಲದೇ ಮಹಿಳಾ ಪ್ರಯಾಣಿಕರ ಜೊತೆ ವಾದ ಮಾಡುತ್ತಾಳೆ. ಈಕೆಯ ವರ್ತನೆ ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡಿದೆ. ಆದರೆ ಈ ರೀತಿ ಅಸಭ್ಯವಾಗಿ ವರ್ತಿಸಿದ ಮಹಿಳೆ ಯಾರು ಎಂಬುದು ತಿಳಿದು ಬಂದಿಲ್ಲ, ಅಧಿಕಾರಿಗಳು ಈಕೆಯ ಗುರುತನ್ನು ಕೆಲ ಕಾರಣಗಳಿಗಾಗಿ ಬಹಿರಂಗಪಡಿಸಿಲ್ಲ.

You may also like

Leave a Comment