Dharmasthala: ಧರ್ಮಸ್ಥಳ ಮೂಲದ ಯುವತಿ, ಏರೋಸ್ಪೇಸ್ ಉದ್ಯೋಗಿ ಪಂಜಾಬ್‌ನಲ್ಲಿ ಸಾವನ್ನಪ್ಪಿರುವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರಕಿದೆ.
ಪ್ರೇಮ ವೈಫಲ್ಯದಿಂದ ಆಕಾಂಕ್ಷ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿರುವ ಕುರಿತು ವರದಿಯಾಗಿದೆ. ಆಕಾಂಕ್ಷ ಪಗ್ವಾಡ ಕಾಲೇಜಿನ ಪ್ರೊ.ಮ್ಯಾಥ್ಯೂ ಅವರನ್ನು ಪ್ರೀತಿಸುತ್ತಿದ್ದರು. ಪ್ರೀತಿ ಯಾವುದೋ ಒಂದು ಕಾರಣಕ್ಕೆ ಮುರಿದು ಬಿದ್ದಿದೆ.
ಕೇರಳ ಮೂಲದ ಪ್ರಾಧ್ಯಪಕ ಮ್ಯಾಥ್ಯೂರನ್ನು ಭೇಟಿ ಮಾಡಲು ಹೋದಾಗ, ಇವರಿಬ್ಬರ ಮಧ್ಯೆ ಜಗಳ ನಡೆಇದೆ. ನಂತರ ಆಕೆ ಆತ್ಮಹತ್ಯೆ ಮಾಡಿದ್ದಾಳೆ ಎಂದು ಪಂಜಾಬ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲೇಜಿಗೆ ಸರ್ಟಿಫಿಕೇಟ್ ತರಲೆಂದು ಹೋದಾಗ ಈ ವಿಚಾರಕ್ಕೆ ಫ್ರೊ.ಮ್ಯಾಥ್ಯೂ ಜೊತೆ ಆಕಾಂಕ್ಷ ಗಲಾಟೆ ಮಾಡಿದ್ದು, ನಂತರ ಮನನೊಂದು ಕಾಲೇಜಿನ ಕಟ್ಟಡದಿಂದ ಜಿಗಿದು ಸೂಸೈಡ್ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸದ್ಯಕ್ಕೆ ಪೊಲೀಸರು ಪ್ರೊ.ಮ್ಯಾಥ್ಯೂ ಅವರನ್ನು ವಿಚಾರಣೆ ಮಾಡುತ್ತಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ವರದಿಯಾಗಿದೆ.
