Home » Belthangady: ಅಕ್ರಮ ಗೋ ಸಾಗಾಟ ಮಾಡಿದವನ ಮನೆ ಜಪ್ತಿ ಮಾಡಿದ ಧರ್ಮಸ್ಥಳ ಪೊಲೀಸರು

Belthangady: ಅಕ್ರಮ ಗೋ ಸಾಗಾಟ ಮಾಡಿದವನ ಮನೆ ಜಪ್ತಿ ಮಾಡಿದ ಧರ್ಮಸ್ಥಳ ಪೊಲೀಸರು

0 comments
Crime

 

Belthangady: ಅಕ್ರಮವಾಗಿ ಗೋಮಾಂಸ ಮಾಡಲು ಮೂರು ದನಗಳನ್ನು ಕಾರಿನಲ್ಲಿ ಸಾಗಾಟ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಇಬ್ಬರು ಆರೋಪಿಗಳಲ್ಲಿ ಒಬ್ಬನ ಮನೆಯನ್ನು ಧರ್ಮಸ್ಥಳ ಪೊಲೀಸರು ಮುಟ್ಟುಗೋಲು ಹಾಕಿ ಜಪ್ತಿ ಮಾಡಿದ್ದಾರೆ.

ಧರ್ಮಸ್ಥಳ ಪೊಲೀಸರು ನ.2 ರಂದು ಪಟ್ರಮೆ ಗ್ರಾಮದ ಪಟ್ಟೂರು ರಸ್ತೆಯಲ್ಲಿ ಗೋ ಮಾಂಸ ಮಾಡಲು ಅಕ್ರಮವಾಗಿ ಮೂರು ದನಗಳನ್ನು KA-19-MC-5862 ನಂಬರಿನ ರಿಡ್ಜ್ ಕಾರಿನಲ್ಲಿ ಸಾಗಾಟ ಮಾಡುವಾಗ ಉಳ್ಳಾಲ ತಾಲೂಕಿನ ಮಹಮ್ಮದ್ ತೌಸೀಫ್‌ ಮತ್ತು ಮಹಮ್ಮದ್ ಸಿನಾನ್ ಸಿಕ್ಕಿ ಬಿದ್ದಿದ್ದರು.

ದನ ನೀಡಿದ ಪಟ್ರಮೆ ಗ್ರಾಮದ ಪಟ್ಟೂರು ನಿವಾಸಿ ಜೋಹಾರ ಸೇರಿ ಮೂವರ ವಿರುದ್ಧ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಕಲಂ 5,12 ಕರ್ನಾಟಕ ಗೋ ಹತ್ಯೆ ನಿಷೇಧ ಕಾಯಿದೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ 2020 ಮತ್ತು ಕಲಂ 11,(1) (D) ಪ್ರಾಣಿ ಹಿಂಸೆ ಕಾಯಿದೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಂತರ ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ಮೂರು ದನಗಳನ್ನು ಆರೋಪಿ A-2 ಉಳ್ಳಾಲ ತಾಲೂಕಿನ ಸಜಿಪನಾಡು ಗ್ರಾಮದ ತಂಚಿಬೆಟ್ಟು ನಿವಾಸಿ ತೌಸೀಫ್ ಮನೆಯಲ್ಲಿ ಗೋಮಾಂಸ ಮಾಡುವುದಕ್ಕಾಗಿ ಕೊಂಡುಹೋಗುತ್ತಿರುವುದಾಗಿ ಬಾಯಿಬಿಟ್ಟಿದ್ದರು. ಇದರಿಂದ ಧರ್ಮಸ್ಥಳ ಪೊಲೀಸರು ಉಳ್ಳಾಲದಲ್ಲಿರುವ ಇಬ್ರಾಹಿಂ ಖಲೀಲ್ @ ತೌಸೀಫ್ ಮನೆಯನ್ನು ನ.4 ರಂದು ಮುಟ್ಟುಗೋಲು ಹಾಕಿ ಜಪ್ತಿ ಮಾಡಿಕೊಂಡಿದ್ದಾರೆ.

You may also like