Illicit Relationship: ಅನೈತಿಕ ಸಂಬಂಧದಲ್ಲಿ ಉಂಟಾದ ಮನಸ್ತಾಪದಿಂದ ಮಹಿಳೆಯೊಬ್ಬಳು ನಿವೃತ್ತ ಇನ್ಸ್‌ಪೆಕ್ಟರ್ ಮೇಲೆ ಸೀಮೆಎಣ್ಣೆ ಸುರಿದು ಸುಟ್ಟು ಹಾಕಿರುವ ಘಟನೆ ಒಡಿಶಾದ ಬೆರ್ಹಾಂಪುರದಲ್ಲಿ ನಡೆದಿದೆ.
ನಿವೃತ್ತ ಪೊಲೀಸ್ ಅಧಿಕಾರಿ ಹರಿಹರ ಸಾಹು ಎಂದು ಗುರುತಿಸಲಾಗಿದೆ. ಸುದೇಶ್ನಾ ಜೇನಾ ಎಂಬ ಮಹಿಳೆಯೇ ಆರೋಪಿ.
ಕೃತ್ಯದ ನಂತರ ಸಾಹು ಅವರ ಮಗಳು ಪೊಲೀಸರಿಗೆ ದೂರನ್ನು ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೃತ ಅಧಿಕಾರಿಯ ಮನೆಯಲ್ಲಿ ಆರೋಪಿತೆ ಬಾಡಿಗೆಗಿದ್ದರು. ನಂತರ ಅಧಿಕಾರಿ ಹಾಗೂ ಮಹಿಳೆಯ ನಡುವೆ ಅನೈತಿಕ ಸಂಬಂಧ ಬೆಳೆದಿದೆ. ಆದರೆ ನಂತರ ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿದೆ. ನಂತರ ಜಗಳವಾಗಿದೆ. ಈ ಜಗಳ ವಿಕೋಪಕ್ಕೆ ಹೋಗಿದ್ದು, ಸೀಮೆ ಎಣ್ಣೆ ಸುರಿದು ಅಧಿಕಾರಿಯನ್ನು ಮಹಿಳೆ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶ್ರವಣ್ ವಿವೇಕ್ ಎಂ ತಿಳಿಸಿದ್ದಾರೆ.
ಮಹಿಳೆ ಕೊಲೆ ಮಾಡಿರುವುದು ಒಪ್ಪಿಕೊಂಡಿದ್ದು, ನಾನು ಮೊದಲೇ ಕೊಲೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದೆ ಎಂದು ಹೇಳಿದ್ದಾಳೆ. ಇವರಿಬ್ಬರ ಅನೈತಿಕ ಸಂಬಂಧದ ಕುರಿತು ಕುಟುಂಬದವರಿಗೆ ಯಾವುದೇ ಮಾಹಿತಿ ಇರಲಿಲ್ಲ. ತನಿಖೆ ನಡೆಯುತ್ತಿದೆ.
