Home » Viral: ಹಾಡ ಹಗಲೇ ಆಟೋದಲ್ಲಿ ಕುಳಿತು ಇಬ್ಬರು ಯುವತಿಯರು ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ ಶಾಕ್ ಆದ ಜನ

Viral: ಹಾಡ ಹಗಲೇ ಆಟೋದಲ್ಲಿ ಕುಳಿತು ಇಬ್ಬರು ಯುವತಿಯರು ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ ಶಾಕ್ ಆದ ಜನ

0 comments

Viral Video : ಹಾಡಹಗಲೇ ಯುವತಿಯರಿಬ್ಬರೂ ಆಟೋದಲ್ಲಿ ಕುಳಿತುಕೊಂಡು ಮಾದಕ ದ್ರವ್ಯಗಳನ್ನು ಸೇವಿಸುತ್ತಿರುವ ಅಘಾತಕಾರಿ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮುಂಬೈನಲ್ಲಿ ಈ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ.

ವಿಡಿಯೋದಲ್ಲಿ ಏನಿದೆ?

ವೈರಲ್ ವಿಡಿಯೋದಲ್ಲಿ, ಇಬ್ಬರು ಯುವತಿಯರು ಮತ್ತು ಪುರುಷನೊಬ್ಬ ಆಟೋರಿಕ್ಷಾದಲ್ಲಿ ಮಾದಕ ವಸ್ತುಗಳನ್ನು ಸೇವಿಸುತ್ತಿರುವುದು ಕಂಡುಬಂದಿದೆ. ರಹಸ್ಯವಾಗಿ ವಿಡಿಯೋ ಚಿತ್ರೀಕರಿಸುತ್ತಿರುವ ವ್ಯಕ್ತಿ, ಅವರಿಗೆ ಬುದ್ಧಿಮಾತು ಹೇಳುತ್ತಾ, ಮಾದಕ ವಸ್ತುಗಳ ಸೇವನೆಯಿಂದ ಅವರ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸುತ್ತಿದ್ದಾನೆ. ಆ ಯುವತಿಯರು ತೀವ್ರವಾಗಿ ವ್ಯಸನಿಯಾಗಿದ್ದು, ಮಾದಕ ವಸ್ತುಗಳನ್ನು ಸೇವಿಸದೆ ಬದುಕಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಆಗ ಆ ವ್ಯಕ್ತಿ, ಮಾದಕ ವಸ್ತುಗಳನ್ನು ಎಲ್ಲಿಂದ ತಂದಿರಿ ಮತ್ತು ದರ ಎಷ್ಟು ಎಂದು ಕೇಳುತ್ತಾನೆ. ಅದಕ್ಕೆ, ಎರಡು ಪೊಟ್ಟಣಗಳಿಗೆ 200 ರೂಪಾಯಿ ಎಂದು ಹೇಳುತ್ತಿದ್ದಾರೆ.

ಈ ಡ್ರಗ್ಸ್ ಸಿಗುವ ಸ್ಥಳ ಮಾಲ್ವಾನಿ ಗೇಟ್ ಸಂಖ್ಯೆ 06 ಎಂದು ವಿಡಿಯೊ ರೆಕಾರ್ಡ್ ಮಾಡಿದ ವ್ಯಕ್ತಿ ಮಾಹಿತಿ ಒದಗಿಸಿ ಮುಂಬೈ ಪೊಲೀಸರು, ಸಿಎಂಒ ಮಹಾರಾಷ್ಟ್ರ, ಎನ್ಸಿಬಿ ಇಂಡಿಯಾ ಮತ್ತು ಪ್ರದೇಶದ ಸ್ಥಳೀಯ ಪ್ರತಿನಿಧಿಯಾಗಿರುವ ಕಾಂಗ್ರೆಸ್ ಶಾಸಕ ಅಸ್ಲಂ ಶೇಖ್ ಅವರನ್ನು ಟ್ಯಾಗ್ ಮಾಡಿದ್ದಾನೆ.

ವೈರಲ್ ವಿಡಿಯೋ ಬಗ್ಗೆ ಮುಂಬೈ ಪೊಲೀಸರ ಪ್ರತಿಕ್ರಿಯೆ:

ಮುಂಬೈ ಪೊಲೀಸರು ವೈರಲ್ ವಿಡಿಯೋವನ್ನು ಗಮನಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಷಯದ ಬಗ್ಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ. ವಿಡಿಯೋ ಪೋಸ್ಟ್‌ನಲ್ಲಿನ ಕಾಮೆಂಟ್‌ನಲ್ಲಿ, ಮುಂಬೈ ಪೊಲೀಸರ ಅಧಿಕೃತ ಖಾತೆ, “ನಾವು ಮಲ್ವಾನಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದೇವೆ” ಎಂದು ಪ್ರತಿಕ್ರಿಯಿಸಿದ್ದಾರೆ.

You may also like