Home » ರೋಗಿ ಜೊತೆ ಸೆಕ್ಸ್ ನಡೆಸಿದ ವೈದ್ಯೆ, ಮೆಡಿಕಲ್ ಲೈಸೆನ್ಸ್ ಕ್ಯಾನ್ಸಲ್

ರೋಗಿ ಜೊತೆ ಸೆಕ್ಸ್ ನಡೆಸಿದ ವೈದ್ಯೆ, ಮೆಡಿಕಲ್ ಲೈಸೆನ್ಸ್ ಕ್ಯಾನ್ಸಲ್

0 comments

ಒಟ್ಟೋವಾ: ಕೆನಡಾದ ರೋಗಿಯ ಜತೆ ಸೆಕ್ಸ್‌ ನಡೆಸಿದ ಆರೋಪದಲ್ಲಿ ಭಾರತೀಯ ಮೂಲದ ವೈದ್ಯೆಯ ಮೆಡಿಕಲ್‌ ಲೈಸೆನ್ಸ್‌ನ್ನು ಅಮಾನತುಗೊಳಿಸಲಾಗಿದೆ.

ವೈದ್ಯೆಯಾದ ಸುಮನ್ ಖುಲ್ಬೆ, ಪುರುಷ ರೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಜತೆಗೇ, ಇನ್ನಿಬ್ಬರೊಂದಿಗೆ ಕೂಡಾ ವೃತ್ತಿಪರವಲ್ಲದ ರೀತಿ ವರ್ತಿಸಿದ್ದಾರೆ ಎಂದು ದೃಡಪಟ್ಟ ಹಿನ್ನೆಲೆಯಲ್ಲಿ ವೈದ್ಯೆ ವಿರುದ್ಧ ಕ್ರಮಕೈಗೊಳ್ಳಲಾಗಿದೆ.

ತನಿಖಾ ಸಮಿತಿಯು ವೈದ್ಯೆಯ ನಡವಳಿಕೆಯನ್ನು ಗಮನಿಸಿದ್ದು, ಆಕೆ ತನ್ನಲ್ಲಿಗೆ ಚಿಕಿತ್ಸೆಗೆ ಬರುವ ರೋಗಿಗಳನ್ನು ರೋಗಿಗಳಂತೆ ಕಾಣುವ ಬದಲು ಅವರನ್ನು ತನ್ನ ಸ್ನೇಹಿತರು ಅಥವಾ ಪಾರ್ಟ್ನರ್‌ ಗಳ ರೀತಿ ನಡೆಸಿಕೊಂಡಿದ್ದಾರೆ ಎಂದು ತನಿಖಾ ಸಮಿತಿ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ:ಒಂದೇ ದಿನ 9 ಲಕ್ಷ ಕೋಟಿ ಕಮಾಯಿ: ಮಸ್ಕ್‌ ಹಿಂದಿಕ್ಕಿ ವಿಶ್ವದ ನಂ.1 ಶ್ರೀಮಂತ ಸ್ಥಾನಕ್ಕೇರಿದ ಎಲಿಸನ್, ಯಾರೀತ ಗೊತ್ತೇ?

ಕೆನಡಾದ ಒಂಟಾರಿಯೊದ ವೈದ್ಯ- ಶಸ್ತ್ರಚಿಕಿತ್ಸಕರ ಕಾಲೇಜು, ರೋಗಿ ವೈದ್ಯರು ನಡುವಣ ಲೈಂಗಿಕ ಸಂಪರ್ಕವನ್ನು ಅಲ್ಲಿ ಅಪರಾಧವೆಂದೇ ಪರಿಗಣಿಸಲಾಗುತ್ತದೆ. ಈ ವಿಷಯದಲ್ಲಿ ತಪ್ಪಿತಸ್ಥರ ಮೇಲೆ ಯಾವುದೇ ಮುಲಾಜಿಲ್ಲದೆ. ಕ್ರಮ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.

You may also like