Home » Kritika Reddy Case: ಡಾ.ಕೃತಿಕಾರೆಡ್ಡಿ ಕೊಲೆ ಪ್ರಕರಣ: ಆರೋಪಿ ಪತಿಯ ಚಾಟ್‌ ಬಹಿರಂಗ, ಶಾಕಿಂಗ್‌ ಮಾಹಿತಿ

Kritika Reddy Case: ಡಾ.ಕೃತಿಕಾರೆಡ್ಡಿ ಕೊಲೆ ಪ್ರಕರಣ: ಆರೋಪಿ ಪತಿಯ ಚಾಟ್‌ ಬಹಿರಂಗ, ಶಾಕಿಂಗ್‌ ಮಾಹಿತಿ

0 comments

Krithikareddy Case: ವೈದ್ಯ ಮಹೇಂದ್ರ ರೆಡ್ಡಿಯಿಂದ ಪತ್ನಿ ಡಾ.ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಯುತ್ತಿದ್ದು, ಪೊಲೀಸರಿಗೆ ಹೊಸ ಹೊಸ ಮಾಹಿತಿ ದೊರಕಿದೆ ಎಂದು ವರದಿಯಾಗಿದೆ. ಆರೋಪಿ ಆಪ್ತ ಸ್ನೇಹಿತೆ ಜೊತೆ ಚಾಟಿಂಗ್‌ ಮಾಡುತ್ತಿದ್ದ. ಪದೇ ಪದೇ ಚಾಟಿಂಗ್‌ ಮಾಡುತ್ತಿದ್ದಂತೆ ಬೇಸರಗೊಂಡ ಆಕೆ ಈತನನ್ನು ಬ್ಲಾಕ್‌ ಮಾಡಿದ್ದಳು. ಹೀಗಾಗಿ ಮಹೇಂದ್ರ ರೆಡ್ಡಿ ಬಳಿಕ ಫೋನ್‌ ಪೇನಲ್ಲಿ ಚಾಟ್‌ ಮಾಡಿದ್ದಾನೆ ಎಂದು ವರದಿಯಾಗಿದೆ.

ಫೋನ್‌ ಪೇ ಮೂಲಕವೇ I killed my wife…because of u ಎಂದು ಸ್ನೇಹಿತೆಗೆ ಮಹೇಂದ್ರರೆಡ್ಡಿ ಮೆಸೇಜ್‌ ಕಳುಹಿಸಿದ್ದ. ಅನಂತರ ಆ ಮೆಸೇಜ್‌ ಡಿಲೀಟ್‌ ಮಾಡಲು ಪ್ರಯತ್ನ ಮಾಡಿದ್ದರೂ ಅದು ಆಗದೇ ಲಾಕ್‌ ಆಗಿದ್ದಾನೆ. ಇದೀಗ ಪೊಲೀಸರು ಸ್ನೇಹಿತೆ ಜೊತೆಗಿನ ಪೂರ್ಣ ಚಾಟಿಂಗ್‌ ಹಿಸ್ಟರಿಯನ್ನು ಪೊಲೀಸರು ರಿಟ್ರೀವ್‌ ಮಾಡಿದ್ದಾರೆ. ವೈಯಕ್ತಿಕ ವಿಚಾರಗಳ ಕುರಿತು ಚಾಟಿಂಗ್‌ ಮಾಡಿರುವುದು ಬೆಳಕಿಗೆ ಬಂದಿದೆ.

ಈ ಘಟನೆಗೆ ಸಂಬಂಧಪಟ್ಟಂತೆ ಯುವತಿಯನ್ನು ಪೊಲೀಸರು ಕರೆಸಿ ಈಗಾಗಲೇ ವಿಚಾರಣೆಯನ್ನೂ ಮಾಡಿದ್ದಾರೆ.

You may also like