Home » Subrahmanya: ಖ್ಯಾತ ಗಾಯಕಿ ಎಸ್‌ ಜಾನಕಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ

Subrahmanya: ಖ್ಯಾತ ಗಾಯಕಿ ಎಸ್‌ ಜಾನಕಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ

0 comments

Subramanya: ಖ್ಯಾತ ಹಿನ್ನೆಲೆ ಗಾಯಕಿ ಎಸ್‌.ಜಾನಕಿ ಅವರು ಇಂದು (ಗುರುವಾರ) ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸುಬ್ರಹ್ಮಣ್ಯ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

ದೇವಸ್ಥಾನದ ವತಿಯಿಂದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್‌ ಹಾಗೂ ಸುಬ್ರಹ್ಮಣ್ಯದ ನಾಗರಿಕರ ಪರವಾಗಿ ಗ್ರಾಮ ಪಂಚಾಯತ್‌ ಸದಸ್ಯ ಹರೀಶ ಇಂಜಾಡಿ ಶಾಲು ಹೊದೆಸಿ, ಪ್ರಸಾದ, ನೆನಪಿನ ಕಾಣಿಕೆಯನ್ನು ಗಾಯಕಿ ಎಸ್‌.ಜಾನಕಿ ಅವರಿಗೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜಯರಾಮ ರಾವ್‌, ಯಜ್ಞೇಶ್‌ ಆಚಾರ್‌, ಮಹೇಶ್‌ ಮತ್ತಿರರು ಉಪಸ್ಥಿತರಿದ್ದರು.

 

You may also like