Home » Jammu Kashmir Phalgam: ಕಲಿಮಾ ಹೇಳದ್ದಕ್ಕೆ ತಂದೆಯ ಹತ್ಯೆ-ಪುತ್ರಿ ಹೇಳಿಕೆ!

Jammu Kashmir Phalgam: ಕಲಿಮಾ ಹೇಳದ್ದಕ್ಕೆ ತಂದೆಯ ಹತ್ಯೆ-ಪುತ್ರಿ ಹೇಳಿಕೆ!

0 comments

Jammu Kashmir Phalgam: ಜಮ್ಮು ಕಾಶ್ಮೀರದಲ್ಲಿ ಉಗ್ರರು ನರಮೇಧ ಮಾಡಿದ್ದು, ಹಿಂದೂಗಳನ್ನೇ ಗುರಿಯಾಗಿಸಿ ಕಲಿಮಾ ಹೇಳಲು ಬಾರದಕ್ಕೆ ತಲೆಗೆ ಗುಂಡಿಟ್ಟು ಕೊಂದಿದ್ದಾರೆ.

ಪುಣೆಯ ಸಂತೋಷ್‌ ಜಗದಾಳೆ (54) ಉಗ್ರರ ಕೃತ್ಯಕ್ಕೆ ಸಾವಿಗೀಡಾಗಿದ್ದು, ತನ್ನ ತಂದೆಯನ್ನು ಹೇಗೆ ಹತ್ಯೆ ಮಾಡಿದರು ಎನ್ನುವುದನ್ನು ಪುತ್ರಿ ಅಸಾವರಿ ಮಾಧ್ಯಮಕ್ಕೆ ಹೇಳಿರುವ ಕುರಿತು ವರದಿಯಾಗಿದೆ.

ಗುಂಡಿನ ಶಬ್ದ ಕೇಳುತ್ತಿದ್ದಂತೆ ನಾವು ಟೆಂಟ್‌ ಒಳಗೆ ಹೋದೆವು. ಅಲ್ಲಿಗೆ ಬಂದ ಉತ್ರ ನಮ್ಮ ತಂದೆಯನ್ನು ಹೊರಗೆ ಬರುವಂತೆ ಕರೆದ. ನಂತರ ಕಲಿಮಾ ಹೇಳುವಂತೆ ಹೇಳಿದ. ನನಗೆ ಅದು ತಿಳಿದಿಲ್ಲ ಎಂದು ಹೇಳಿದಾಗ ಕಿವಿ, ತಲೆ, ಬೆನ್ನಿಗೆ ಮೂರು ಗುಂಡು ಹಾರಿಸಿ ಹತ್ಯೆ ಮಾಡಿದರು ಎಂದು ಹೇಳಿದ್ದಾರೆ.

ಉಗ್ರರು 26 ಪ್ರವಾಸಿಗರನ್ನು ಕೊಂದಿದ್ದಾರೆ. ಇಬ್ಬರು ವಿದೇಶಿಗರು ಸೇರಿ ರಾಶಿ ರಾಶಿ ಹೆಣಗಳನ್ನು ಟಾರ್ಪಲ್‌ನಲ್ಲಿ ಮುಚ್ಚಲಾಗಿದೆ. ಪುರುಷರನ್ನೇ ಟಾರ್ಗೆಟ್‌ ಮಾಡಿ ಹತ್ಯೆ ಮಾಡಲಾಗಿದೆ.

You may also like