Home » Chemical weapons: ಐವರು ಐಸಿಸ್ ಉಗ್ರರು ಅರೆಸ್ಟ್: ಭಾರೀ ಪ್ರಮಾಣದ ಕೆಮಿಕಲ್ ವೆಪನ್ ವಶ

Chemical weapons: ಐವರು ಐಸಿಸ್ ಉಗ್ರರು ಅರೆಸ್ಟ್: ಭಾರೀ ಪ್ರಮಾಣದ ಕೆಮಿಕಲ್ ವೆಪನ್ ವಶ

0 comments

Chemical weapons: ಕೆಮಿಕಲ್ ವೆಪನ್ ಅಂದರೆ ರಾಸಾಯನಿಕ ಶಸ್ತ್ರಾಸ್ತ್ರ ತಯಾರಿಸುತ್ತಿದ್ದ ಹಾಗೂ ಮುಸ್ಲಿಂ ಸಂಘಟನೆಗೆ ಯುವಕರನು ನೇಮಿಸಿಕೊಳ್ಳಲು ʻಖಿಲಾಫತ್‌ʼ(Khilafat Model) ಮಾದರಿ ಅನುಸರಿಸುತ್ತಿದ್ದ ಐವರು ಶಂಕಿತ ಐಸಿಸ್‌ ಉಗ್ರರನ್ನು ವಿವಿಧ ಪೊಲೀಸರು ಬಂಧಿಸಿದ್ದಾರೆ.

ದೆಹಲಿ (Delhi), ಮಧ್ಯಪ್ರದೇಶ, ಜಾರ್ಖಂಡ್ ಮತ್ತು ತೆಲಂಗಾಣದಲ್ಲಿ ಶಂಕಿತ ಉಗ್ರರನ್ನ ಬಂಧಿಸಲಾಗಿದೆ. ಮುಂಬೈ ನಿವಾಸಿ ಅಫ್ತಾಬ್, ಅಬು ಸುಫಿಯಾನ್‌ ಇಬ್ಬರನ್ನ ದೆಹಲಿಯ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ, ಆಶರ್ ದಾನಿಶ್‌ ರಾಂಚಿಯಲ್ಲಿ, ಕಮ್ರಾನ್ ಖುರೇಷಿಯನ್ನ ಮಧ್ಯಪ್ರದೇಶದ ರಾಜ್‌ಗಢದಲ್ಲಿ ಮತ್ತು ಹುಜೈಫ್ ಯೆಮೆನ್‌ನ ತೆಲಂಗಾಣದಲ್ಲಿ ಬಂಧಿಸಲಾಗಿದೆ.

ಇದನ್ನೂ ಓದಿ:Suicide: ಉದ್ಯೋಗ ಸಿಗಲಿಲ್ಲ ಎಂದು ಯುವಕ ಆತ್ಮ*ಹತ್ಯೆ!

ಬಂಧಿತ ಆರೋಪಿಗಳಿಂದ ಒಂದು ಪಿಸ್ತೂಲ್‌, ಡಿಜಿಟಲ್‌ ಸಾಧನಗಳು, ಭಾರೀ ಪ್ರಮಾಣದ ಕೆಮಿಕಲ್‌ ವೆಪೆನ್‌ (Chemical weapons) , ವೆಪೆನ್‌ ಕಾರ್ಟ್ರಿಡ್ಜ್‌ ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಿದ ಕೆಮಿಕಲ್‌ಗಳ ಪೈಕಿ ಹೈಡ್ರೋಕ್ಲೋರಿಕ್ ಆಮ್ಲ, ನೈಟ್ರಿಕ್ ಆಮ್ಲ, ಸೋಡಿಯಂ ಬೈಕರ್ಬನೇಟ್, ಸಲ್ಫರ್ ಪೌಡರ್, pH ಮೌಲ್ಯ ಪರೀಕ್ಷಕ ಮತ್ತು ಬಾಲ್ ಬೇರಿಂಗ್‌ಗಳು ಸೇರಿವೆ. ಅದಲ್ಲದೆ ಲ್ಯಾಪ್ಟಾಪ್, ಮೊಬೈಲ್ ಫೋನ್, ಡಿಜಿಟಲ್‌ ತಕ್ಕಡಿ, ಬೀಕರ್ ಸೆಟ್, ಗ್ಲೌಸ್‌, ಆಕ್ಸಿಜನ್‌ ಮಾಸ್ಕ್‌, ಮದರ್‌ಬೋರ್ಡ್ ಹೊಂದಿರುವ ಪ್ಲಾಸ್ಟಿಕ್ ಕಂಟೇನರ್ ವಶಪಡಿಸಿಕೊಳ್ಳಲಾಗಿದೆ.

You may also like