Home » Mangaluru: ಮಂಗಳೂರು: ಆಕ್ರಮ ದನಸಾಗಾಟ ಮಾಡಿ ತಲೆಮರೆಸಿಕೊಂಡಿದ್ದ ನಾಲ್ವರ ಬಂಧನ!

Mangaluru: ಮಂಗಳೂರು: ಆಕ್ರಮ ದನಸಾಗಾಟ ಮಾಡಿ ತಲೆಮರೆಸಿಕೊಂಡಿದ್ದ ನಾಲ್ವರ ಬಂಧನ!

by ಕಾವ್ಯ ವಾಣಿ
0 comments

Mangaluru:ಮೂಡಬಿದಿರೆ ಕಡೆಯಿಂದ ಕೈಕಂಬ ಕಡೆಗೆ ಸೂರಲ್ಪಾಡಿ ಮಾರ್ಗವಾಗಿ 19 ದನಗಳನ್ನು ಪಿಕಪ್ ವಾಹನದಲ್ಲಿ ಹಿಂಸಾತ್ಮಾಕವಾಗಿ ತುಂಬಿಸಿ ಆಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಮಾ.28 ರಂದು ಬಜರಂಗದಳ ಕಾರ್ಯಕರ್ತರು ಸೂರಲ್ಪಾಡಿ ಬಳಿ ಪತ್ತೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದರು.

ಈ ಘಟನೆಗೆ ಸಂಬಂಧಿಸಿ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ನಿವಾಸಿ ಮೊಹಮ್ಮದ್ ತೌಸಿಪ್ (26) ನನ್ನು ಪೊಲೀಸರು ಬಂಧಿಸಿ 6 ಲ.ರೂ ಮೌಲ್ಯದ ಹುಂಡೈ ಕಾರನ್ನು ವಶಪಡಿಸಿಕೊಂಡಿದ್ದರು. ಘಟನೆಯ ಸಂದರ್ಭ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದರು.

ಇದೀಗ ತಲೆಮರೆಸಿಕೊಂಡಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬೆಳ್ತಂಗಡಿ ತಾಲೂಕಿನ ಪೆರಂತಡ್ಕ ಕಾಶೀಪಟ್ಣ ನಿವಾಸಿ ಫಾರೀಸ್ ಸಲ್ದಾನ, ಮಂಗಳೂರು ತಾಲೂಕಿನ 62ನೇ ತೋಕೂರು ಗ್ರಾಮದ ನಿವಾಸಿ ಅರಾಫತ್ ಆಲಿ(36),ಮೂಡಬಿದಿರೆ ತಾಲೂಕಿನ ಪ್ರಾಂತ್ಯ ಗ್ರಾಮದ ನಿವಾಸಿ ಅಬ್ದುಲ್ ನಜೀರ್(31),ಮಂಗಳೂರು (Mangaluru) ತಾಲೂಕಿನ 62 ನೇ ತೋಕೂರು ಗ್ರಾಮದ ನಿವಾಸಿ ಮೊಹಮ್ಮದ್ ಅಫ್ರಿದ್(27) ಎಂದು ಗುರುತಿಸಲಾಗಿದೆ.

You may also like