Home » ಗ್ಯಾಂಗ್‌ಸ್ಟರ್ ಅನ್ನೋಲ್ ಬಿಷ್ಟೋಯಿ ಗಡೀಪಾರು: ಬುಧವಾರ ಭಾರತಕ್ಕೆ?

ಗ್ಯಾಂಗ್‌ಸ್ಟರ್ ಅನ್ನೋಲ್ ಬಿಷ್ಟೋಯಿ ಗಡೀಪಾರು: ಬುಧವಾರ ಭಾರತಕ್ಕೆ?

0 comments

ಹೊಸದಿಲ್ಲಿ: ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಟೋಯ್’ನ ಸಹೋದರ ಅನ್ನೋಲ್ ಬಿಷ್ಟೋಯ್ ನನ್ನು ಅಮೆರಿಕ ಸರಕಾರವು ಭಾರತಕ್ಕೆ ಮಂಗಳವಾರ ಗಡೀಪಾರು ಮಾಡಿದೆ ಎನ್ನಲಾಗಿದೆ. ಆತ ಶೀಘ್ರ ಭಾರತಕ್ಕೆ ತಲುಪುವ ನಿರೀಕ್ಷೆಯಿದೆ. ಪಂಜಾಜಿ ಗಾಯಕ ಸಿಧು ಮೂಸೇ ವಾಲ ಹಾಗೂ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಸೇರಿ ಹಲವು ಅಪರಾಧಗಳಲ್ಲಿ ಅನ್ನೋಲ್ ಭಾರತಕ್ಕೆ ಬೇಕಾಗಿದ್ದ.

ಅನ್ಮೋಲ್ ಕಾನೂನುಬಾಹಿರವಾಗಿ ಅಮೆರಿಕ ಪ್ರವೇಶಿಸಿದ್ದ. ಆ ಆರೋಪದಡಿ ಆತನನ್ನು ಅಮೆರಿಕದ ಅಧಿಕಾರಿಗಳು 2024ರಲ್ಲಿ ಬಂಧಿಸಿದ್ದರು. ಈತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಇಂಟರ್‌ ಪೋಲ್ ಮೂಲಕ ಅಮೆರಿಕಕ್ಕೆ ಮನವಿ ಮಾಡಿತ್ತು. ಈ ಗಡೀಪಾರಿನ ಬಗ್ಗೆ ಬಾಬಾ ಸಿದ್ದಿಕಿ ಪುತ್ರ ಜೀಶನ್ ಸಿದ್ದಿಕಿಗೆ ಇಮೇಲ್ ಮೂಲಕ ಅಮೆರಿಕ ಅಧಿಕಾರಿಗಳು ಖಚಿತಪಡಿಸಿದ್ದಾರೆ ಎಂದು ವರದಿಯಾಗಿದೆ.

You may also like