Home » Harassment: ‘ನನ್ನ ಜೊತೆ ಮಲಗು’ ಎಂದು ಯುವತಿಯಿಂದ ಕಿರುಕುಳ – ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ !!

Harassment: ‘ನನ್ನ ಜೊತೆ ಮಲಗು’ ಎಂದು ಯುವತಿಯಿಂದ ಕಿರುಕುಳ – ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ !!

0 comments

Harrasment : ಹುಡುಗಿಯರ ಮೇಲೆ ಹುಡುಗರು ದಬ್ಬಾಳಿಕೆ ನಡೆಸುವ, ಲೈಂಗಿಕ ದೌರ್ಜನ್ಯ ನಡೆಸುವಂತಹ ಪ್ರಕರಣಗಳನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ಉಲ್ಟಾ ಪ್ರಕರಣ ಬೆಳಕಿಗೆ ಬಂದಿದ್ದು ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳೆಯನಿಗೆ ನನ್ನ ಜೊತೆ ಮಲಗು, ಲೈಂಗಿಕತೆಗೆ ಸಹಕರಿಸು ಎಂದು ಪೀಡಿಸಿದಂತಹ ಘಟನೆ ನಡೆದಿದೆ. ಅಷ್ಟೇ ಅಲ್ಲದೆ ಯುವತಿಯ ಕಿರುಕುಳಕ್ಕೆ ಆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೌದು, ಹಿಮಾಚಲ ಪ್ರದೇಶದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಮಂಡಿ ಜಿಲ್ಲೆಯ ಸುಂದರ್‌ ನಗರದ ಜವಹರಲಾಲ್‌ ನೆಹರೂ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಹಾಸ್ಟೆಲ್‌ನಲ್ಲಿ ಅರ್ಪಿತ್‌ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳದಲ್ಲಿ ಡೆತ್‌ನೋಟ್‌ ಪತ್ತೆಯಾಗಿದೆ (Crime News). ಇದರಲ್ಲಿ ಆತ ತನ್ನ ಸಾವಿಗೆ ಸಹಪಾಠಿ ವಿದ್ಯಾರ್ಥಿನಿಯೇ ಕಾರಣ ಎಂದು ಬರೆದಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅರ್ಪಿತ್‌ನ ತಾಯಿ ಮಗನ ಸಾವಿಗೆ ಆತನ ಸಹಪಾಠಿ ಲಾವಣ್ಯ ಕಾರಣ ಎಂದು ಆರೋಪಿಸಿದ್ದಾರೆ. ಆಕೆ ದೈಹಿಕ ಸಂಪರ್ಕ ಬೆಳೆಸುವಂತೆ ನಿರಂತರವಾಗಿ ತನ್ನ ಮಗನಿಗೆ ಕಿರುಕುಳ ನೀಡುತ್ತಿದ್ದಳು ಎಂದು ತಿಳಿಸಿದ್ದಾರೆ. ಲಾವಣ್ಯ ತನಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎಂದು ಆತ ಬರೆದ ಡೆತ್‌ನೋಟ್‌ ಆಧಾರದಲ್ಲಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ

You may also like