Home » Haridwar Horror: ಮೌಢ್ಯತೆಯ ಪರಮಾವಧಿ, ಕ್ಯಾನ್ಸರ್ ನಿಂದ ಪರಿಹಾರ ಪಡೆಯಲು ಗಂಗಾ ನದಿಯಲ್ಲಿ ಮುಳುಗಿಸಿದ ತಾಯಿ; !

Haridwar Horror: ಮೌಢ್ಯತೆಯ ಪರಮಾವಧಿ, ಕ್ಯಾನ್ಸರ್ ನಿಂದ ಪರಿಹಾರ ಪಡೆಯಲು ಗಂಗಾ ನದಿಯಲ್ಲಿ ಮುಳುಗಿಸಿದ ತಾಯಿ; !

0 comments

Haridwar Horror: ಮೂಢ ನಂಬಿಕೆಗಳು ಮನುಷ್ಯನ ಜೀವಕ್ಕೆ ಕುತ್ತು ತರುತ್ತದೆ ಎಂಬುದಕ್ಕೆ ನಿದರ್ಶನ ಎನ್ನುವ ಹಾಗೆ ಘಟನೆಯೊಂದು ಬೆಳಕಿಗೆ ಬಂದಿದೆ. ರಕ್ತದ ಕ್ಯಾನ್ಸರ್‌ನಿಂದ (Blood Cancer) ಬಳಲುತ್ತಿದ್ದ 5 ವರ್ಷದ ಬಾಲಕನು ಕಾಯಿಲೆಯಿಂದ ಗುಣಮುಖನಾಗಬೇಕೆಂದು ಆತನ ಪೋಷಕರು ಉತ್ತರಾಖಂಡದ ಹರಿದ್ವಾರದಲ್ಲಿರುವ (Haridwar) ಗಂಗಾ ನದಿಯಲ್ಲಿ (Ganga River) ಮುಳುಗಿಸಿದ ಘಟನೆ ನಡೆದಿದೆ. ಇದರಿಂದ ಬಾಲಕ ಉಸಿರುಗಟ್ಟಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಭೀಕರ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

 

ಬಾಲಕನ ತಂದೆ-ತಾಯಿ ಹಾಗೂ ಮತ್ತೊಬ್ಬ ಮಹಿಳಾ ಸಂಬಂಧಿಯು ಹರಿದ್ವಾರದ ಗಂಗಾ ನದಿಯಲ್ಲಿ ಬಾಲಕನನ್ನು ಸುದೀರ್ಘ ಅವಧಿಗೆ ಮುಳುಗಿಸಿದ್ದು, ಇದರಿಂದ ಬಾಲಕ ರಕ್ತದ ಕ್ಯಾನ್ಸರ್‌ನಿಂದ ಗುಣಮುಖನಾಗುತ್ತಾನೆ ಎಂದು ನಂಬಿದ್ದರು.ಕುಟುಂಬಸ್ಥರು ಪ್ರಾರ್ಥನೆ ಮಾಡುತ್ತ ಬಾಲಕನನ್ನು ಸುದೀರ್ಘವಾಗಿ ಮುಳುಗಿಸಿದ್ದಾರೆ. ಈ ಸಂದರ್ಭ ಉಸಿರುಗಟ್ಟಿದ ಬಾಲಕನು ಕೂಡಲೇ ಕೂಗಿ ಜೀವ ಉಳಿಸಲು ಮನವಿ ಮಾಡಿದ್ದಾನೆ. ಆದರೆ, ಕುಟುಂಬಸ್ಥರ ಆತನನ್ನು ಮುಳುಗಿಸಿದ ಹಿನ್ನೆಲೆ ಜೀವ ಕಳೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ.

 

ಬಾಲಕನು ನದಿಯ ತೀರದಲ್ಲಿ ಶವವಾಗಿ ಬಿದ್ದಿರುವ, ಆತನ ಕುಟುಂಬಸ್ಥರು ಆಕ್ರಂದನ ವ್ಯಕ್ತಪಡಿಸುತ್ತಿರುವ ವಿಡಿಯೊ ವೈರಲ್‌ ಆಗಿದೆ. ನನ್ನನ್ನು ಮೇಲಕ್ಕೆ ಎತ್ತಿ ಎಂದು ಅತ್ತರು ಕೂಡ ಮನೆಯವರು ಮೌಡ್ಯದಲ್ಲಿ ಮುಳುಗಿದ್ದು ಕಂಡುಬಂದಿದೆ. ಸದ್ಯ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

https://x.com/lavelybakshi/status/1750163146860306454?s=20

You may also like

Leave a Comment