Home » Hassan: ಮೀನು ತಿಂದು ಇಬ್ಬರ ಮೃತ್ಯು; 15 ಮಂದಿ ತೀವ್ರ ಅಸ್ವಸ್ಥ

Hassan: ಮೀನು ತಿಂದು ಇಬ್ಬರ ಮೃತ್ಯು; 15 ಮಂದಿ ತೀವ್ರ ಅಸ್ವಸ್ಥ

0 comments
Hassan

Hassan: ಮೀನು ತಿಂದು ಇಬ್ಬರು ಮೃತಪಟ್ಟ ಘಟನೆಯೊಂದು ನಡೆದಿದೆ. ಅರಕಲಗೂಡು ತಾಲೂಕಿನ ಬಸವನಹಳ್ಳಿ ಕೆರೆ ಮೀನು ತಿಂದ ನಂತರ ಈ ಘಟನೆ ನಡೆದಿದೆ. ಇದರಲ್ಲಿ ಇಬ್ಬರು ಮೃತಪಟ್ಟಿದ್ದು, ಹಾಗೂ 15 ಮಂದಿ ಅಸ್ವಸ್ಥಗೊಂಡಿದ್ದಾರೆ.

ಇದನ್ನೂ ಓದಿ: Raju Kage: ಹಿಂದೂ ಕಾರ್ಯಕರ್ತರು ಗತಿಯಿಲ್ಲದವರು, ಭಿಕ್ಷುಕರು – ನಾಲಗೆ ಹರಿಬಿಟ್ಟ ಕಾಂಗ್ರೆಸ್ ಶಾಸಕ ರಾಜು ಕಾಗೆ !!

ರವಿಕುಮಾರ್‌ (46), ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಸನ್ಯಾಸಿಪುರದ ಪುಟ್ಟಮ್ಮ (50) ಮೃತರು.

ಇದನ್ನೂ ಓದಿ: Heatwave: ಹೆಚ್ಚಿದ ತಾಪಮಾನ; ಮೇ 6 ರವರೆಗೆ ವೃತ್ತಿಪರ ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ರಜೆ

ಬಸವನಹಳ್ಳಿ ಗ್ರಾಮದ ಕೆರೆ ನೀರಿಲ್ಲದೆ ಬತ್ತಿ ಹೋಗಿತ್ತು. ಖಾಲಿಯಾಗಿದ್ದ ಕೆರೆಯ ಕೆಸರಿನಲ್ಲಿದ್ದ ಮೀನುಗಳನ್ನು ಹಿಡಿದು ತಂದು ಮೀನು ಅಡುಗೆ ಮಾಡಿ ಊಟ ಮಾಡಿದ್ದಾರೆ. ನಂತರ ವಾಂತಿ, ಭೇದಿಯಿಂದ ಬಳಲಿ 15 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದು, ಇಬ್ಬರು ಸಾವಿಗೀಡಾಗಿದ್ದರು. ಅರಕಲಗೂಡು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

You may also like

Leave a Comment