10
Udupi: ಗಂಡ ಹೆಂಡತಿ ಜಗಳ ಗಂಡನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಏ. 30ರಂದು ಹೆಬ್ರಿಯ ನಾಲ್ಕೂರಿನ ಮುದ್ದೂರು ಪೇಟೆ ಸಮೀಪ ಮನೆಯಲ್ಲಿ ಸಂಭವಿಸಿದೆ.
ಕೊಲೆಯಾದ ವ್ಯಕ್ತಿಯನ್ನು ಗಣಪತಿ ನಾಯ್ಕ್ ಎಂದು ಗುರುತಿಸಲಾಗಿದೆ. ಇವರು ವಿಪರೀತ ಕುಡಿತದ ಚಟ ಹೊಂದಿದ್ದು ಪ್ರತಿನಿತ್ಯ ಕುಡಿದು ಬಂದು ಹೆಂಡತಿಯೊಂದಿಗೆ ಜಗಳವಾಡುತ್ತಿದ್ದರು.
ಅದೇ ರೀತಿ ಇಂದು ಮಧ್ಯಾಹ್ನ ಸುಮಾರು 2.30 ಗಂಟೆ ವೇಳೆಗೆ ಕುಡಿದು ಹೆಂಡತಿಯೊಂದಿಗೆ ಜಗಳವಾಡಿದ್ದು, ಜಗಳ ಅತಿರೇಕವಾಗಿ ಹೆಂಡತಿ ಕೋಪದಿಂದ ಗಂಡನಿಗೆ ಕತ್ತಿಯಲ್ಲಿ ಕಡಿದಿದ್ದಾರೆ ಎಂದು ಹೇಳಲಾಗುತ್ತಿದೆ. ಪರಿಣಾಮವಾಗಿ ಗಂಡ ಗಣಪತಿ ನಾಯ್ಕ್ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರಕರಣ ದಾಖಲು ಆಗಿದ್ದು, ಹೆಬ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
