Home » Murder: ಹಿಂದೂ ಮುಸ್ಲಿಂ ಪ್ರೇಮ: ಮುಸಲ್ಮಾನರ ಹಿಗ್ಗಾಮುಗ್ಗ ಥಳಿತಕ್ಕೆ ಹಿಂದೂ ಯುವಕ ಬಲಿ!

Murder: ಹಿಂದೂ ಮುಸ್ಲಿಂ ಪ್ರೇಮ: ಮುಸಲ್ಮಾನರ ಹಿಗ್ಗಾಮುಗ್ಗ ಥಳಿತಕ್ಕೆ ಹಿಂದೂ ಯುವಕ ಬಲಿ!

0 comments

Murder: ಹಿಂದೂ ಮುಸ್ಲಿಂ ಪ್ರೇಮ ವಿಚಾರದಲ್ಲಿ, ಮುಸಲ್ಮಾನರ ಹಿಗ್ಗಾಮುಗ್ಗ ಥಳಿತಕ್ಕೆ ಹಿಂದೂ ಯುವಕ ಬಲಿಯಾಗಿದ್ದಾನೆ. ಹೌದು, ಬಾಂಗ್ಲಾದೇಶದಲ್ಲಿ ಮತ್ತೆ ಮುಸಲ್ಮಾನರ ಅಟ್ಟಹಾಸಕ್ಕೆ ಹಿಂದೂ ಯುವಕ ಬಲಿಯಾಗಿದ್ದಾನೆ. ಪದೇ ಪದೇ ನೆರೆಯ ದೇಶವಾದ ಬಾಂಗ್ಲಾದಲ್ಲಿ ಇಂತಹ ಹೀನಾಯ (Murder) ಘಟನೆಗಳೂ ನಡೆಯುತ್ತಲೇ ಇದ್ದು, ಇದೀಗ ಮುಸ್ಲಿಂ ಯುವತಿಯ ಜೊತೆಗೆ ಪ್ರೇಮ ಸಂಬoಧ ಹೊಂದಿದ್ದ ಎಂಬ ಕಾರಣಕ್ಕೆ ಹಿಂದೂ ಯುವಕನನ್ನು ಮೂವರು ಮೌಲ್ವಿಗಳು ಹಿಗ್ಗಾಮುಗ್ಗ ಥಳಿಸಿ ಹತ್ಯೆ ಮಾಡಿದ್ದಾರೆ.

ಮಾಹಿತಿ ಪ್ರಕಾರ, ಢಾಕಾದಲ್ಲಿನ ಕಿಶೋರಗಂಜ ಜಿಲ್ಲೆಯ ನಿವಾಸಿಯಾದ ರೀಡಾಯ್ ರವಿ ದಾಸ್ ಎಂಬ ಹಿಂದೂ ಯುವಕನನ್ನು ನವಂಬರ್ 17ರಂದು ಹತ್ಯೆ ಮಾಡಲಾಗಿದೆ. ಮೂವರು ಮೌಲ್ವಿಗಳು ರವಿ ದಾಸ್ ಎಂಬವನನ್ನು ಅವನ ಅಂಗಡಿಯಿoದ ಅಪಹರಿಸಿ ನಿಗೂಢ ಸ್ಥಳಕ್ಕೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದಾರೆ. ಮೌಲ್ವಿಗಳು ಅವನಿಗೆ ಮನಸೋ ಇಚ್ಛೆ ಥಳಿಸಿ ಹಿಂಸತ್ಮಾಕವಾಗಿ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ.

“ಈ ಯುವಕ ಮುಸ್ಲಿಂ ಯುವತಿಯ ಜೊತೆಗೆ ಪ್ರೀತಿಯಲ್ಲಿದ್ದು, ಆಕೆಯನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳಿಸಲು ಬಯಸಿದ್ದನು ಹಾಗಾಗಿ ನಾವು ಅವನನ್ನು ಸಾಯಿಸಿದ್ದೇವೆ” ಎಂದು ಮೌಲ್ವಿಗಳು ಆರೋಪಿಸಿದ್ದಾರೆ. ಈ ಘಟನೆಯ ನಂತರ ರೀಡಾಯ್ ನ ಕುಟುಂಬದವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

You may also like

Leave a Comment