Home » ಹುಬ್ಬಳ್ಳಿ: 9ನೇ ತರಗತಿ ಬಾಲಕರಿಂದ ಬಾಲಕಿ ಮೇಲೆ ಗ್ಯಾಂಗ್‌ ರೇ*ಪ್‌: ವಿಡಿಯೋ ಮಾಡಿ ಬ್ಲಾಕ್‌ಮೇಲ್

ಹುಬ್ಬಳ್ಳಿ: 9ನೇ ತರಗತಿ ಬಾಲಕರಿಂದ ಬಾಲಕಿ ಮೇಲೆ ಗ್ಯಾಂಗ್‌ ರೇ*ಪ್‌: ವಿಡಿಯೋ ಮಾಡಿ ಬ್ಲಾಕ್‌ಮೇಲ್

0 comments

ಹಬ್ಬಳ್ಳಿ ನಗರದ ಶಹರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 13 ವರ್ಷದ ಬಾಲಕಿ ಮೇಲೆ ಮೂವರು ಬಾಲಕರು ಅತ್ಯಾಚಾರ ಮಾಡಿದ ವೀಡಿಯೋ ಮಾಡಿದ್ದಾರೆ.

ಒಂದೇ ಏರಿಯಾದಲ್ಲಿ ವಾಸವಾಗಿರುವ ಬಾಲಕಿ ಮತ್ತು ಮೂವರು ಅಪ್ರಾಪ್ತ ಬಾಲಕರು ಪರಿಚಿತರು. ಓರ್ವ ಬಾಲಕ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ಇದನ್ನು ವಿಡಿಯೋ ಮಾಡಿ ಇನ್ನೊಬ್ಬ ಸ್ನೇಹಿತನಿಗೆ ಹೇಳಿದ್ದಾನೆ.

ನಂತರ ಮರುದಿನ ಬಾಲಕಿಯನ್ನು ಕರೆದುಕೊಂಡು ಹೋಗಿ ಬೆದರಿಕೆ ಹಾಕಿ ಆತ ಅತ್ಯಾಚಾರ ಮಾಡಿ ಇನ್ನೋರ್ವ ಸ್ನೇಹಿತರಿಗೆ ವಿಷಯ ತಿಳಿಸಿದ್ದಾನೆ. ಆತ ಕೂಡ ಮತ್ತೊಂದು ದಿನ ಬಾಲಕಿಯನ್ನು ಬೆದರಿಸಿ ಅತ್ಯಾಚಾರ ಮಾಡಿದ್ದಾನೆ. ಈ ಮೂವರು ಬಾಲಕರು ವಿಡಿಯೋ ಮಾಡಿ, ಬಾಲಕಿಗೆ ಬೆದರಿಸಿದ್ದಾರೆ. ಹೀಗಾಗಿ ಬಾಲಕಿ ಮನೆಯಲ್ಲಿ ಈ ವಿಷಯ ಹೇಳಿರಲಿಲ್ಲ.

ಒಂದು ದಿನ ಬಾಲಕಿಗೆ ಹೊಟ್ಟೆ ನೋವು ಕಾಡಿದ್ದು ತಾಯಿ ವಿಚಾರಣೆ ಮಾಡಿದಾಗ ಅತ್ಯಾಚಾರ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ತಾಯಿ ಶಹರ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ್ದಾರೆ. ಮೂವರು ಬಾಲಕರು 14-15 ವರ್ಷದವಾರಿಗದ್ದು, 9 ನೇ ತರಗತಿಯ ವಿದ್ಯಾರ್ಥಿಗಳು.

ಅಪ್ರಾಪ್ತ ಬಾಲಕರ ವಿಚಾರಣೆಯನ್ನು ಪೊಲೀಸರು ಮಾಡಿದ್ದು, ಬಾಲಕಿಯ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ.

12-13 ವರ್ಷ ವಯಸ್ಸಿನ ಬಾಲಕಿಗೆ ರಕ್ಷಣೆ ನೀಡಲಾಗಿದ್ದು, ಮೂವರು ಹುಡುಗರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹುಬ್ಬಳ್ಳಿ-ಧಾರವಡ ಪೊಲೀಸ್‌ ಆಯುಕ್ತ ಎನ್.ಶಶಿಕುಮಾರ್‌ ತಿಳಿಸಿದ್ದಾರೆ.

You may also like