Home » Koppala: ಅಶ್ಲೀಲ ವಿಡಿಯೋದ ಭಂಗಿಗೆ ಆಸೆ ಪಟ್ಟ ಗಂಡ; ಒನಕೆಯಿಂದ ಹೊಡೆದು ಕೊಂದ ಹೆಂಡತಿ

Koppala: ಅಶ್ಲೀಲ ವಿಡಿಯೋದ ಭಂಗಿಗೆ ಆಸೆ ಪಟ್ಟ ಗಂಡ; ಒನಕೆಯಿಂದ ಹೊಡೆದು ಕೊಂದ ಹೆಂಡತಿ

0 comments
Crime

Koppala: ಅತಿಯಾದ ಲೈಂಗಿಕ ಕಿರುಕುಳ ಮತ್ತು ಅಶ್ಲೀಲ ವಿಡಿಯೋಗಳ ಅನುಕರಣೆ ಮಾಡಲು ಹೆಂಡತಿಯನ್ನು ಪೀಡಿಸಿದ ಗಂಡನೋರ್ವ ಆಕೆಯ ಸಿಟ್ಟಿಗೆ ಬಲಿಯಾದ ಘಟನೆ ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ಕೆಪಿಸಿಎಲ್‌ನಲ್ಲಿ ಅಪರೇಟರ್‌ ಆಗಿ ಕೆಲಸ ಮಾಡುತ್ತಿದ್ದ 51 ವರ್ಷದ ರಮೇಶ್‌ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ರಮೇಶ್‌ ನನ್ನು ಒನಕೆಯಿಂದ ಹೊಡೆದು ಕೊಲೆ ಮಾಡಿರುವ ಆರೋಪದ ಮೇಲೆ ಪತ್ನಿ ಮಹಾದೇವಿ (ಉಮಾದೇವಿ) ಎಂಬಾಕೆಯನ್ನು ಮುನಿರಾಬಾದ್‌ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಹಾದೇವಿ ಮತ್ತು ರಮೇಶ್‌ ನಡುವೆ ವೈವಾಹಿಕ ಜೀವನದಲ್ಲಿ ನಿತ್ಯ ಜಗಳ ನಡೆಯುತ್ತಿತ್ತು. ವಯಸ್ಸು 50 ದಾಟಿದ್ದರೂ, ಪತಿ ರಮೇಶ್‌ ನಿರಂತರವಾಗಿ ಪತ್ನಿ ಮಹಾದೇವಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ತನ್ನ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ತೋರಿಸಿ, ಅದರಲ್ಲಿ ಇರುವ ರೀತಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಪೀಡಿಸುತ್ತಿದ್ದ. ಇದರಿಂದ ಹೆಂಡತಿ ತೀವ್ರ ಬೇಸತ್ತಿದ್ದಳು.

ಮನೆ ಖರ್ಚಿಗೂ ಹಣ ನೀಡದೆ ಸತಾಯಿಸುತ್ತಿದ್ದ. ಹೀಗಾಗಿ ನಿನ್ನೆ ಕೂಡಾ ತಡರಾತ್ರಿ ಇಬ್ಬರ ಮಧ್ಯೆ ಜಗಳವಾಗಿದೆ. ಕೋಪದಿಂದ ಮಹಾದೇವಿ, ಮನೆಯಲ್ಲಿದ್ದ ಒನಕೆಯಿಂದ ರಮೇಶ್‌ರ ತಲೆಗೆ ಬಲವಾಗಿ ಹೊಡೆದಿದ್ದಾಳೆ. ರಮೇಶ್‌ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಮುನಿರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

You may also like