Home » UP: ಮದುವೆಯಾದ ಒಂದೇ ವಾರಕ್ಕೆ ಪತ್ನಿಯ ಭೀಕರ ಕೊಲೆ ಮಾಡಿದ ಪತಿ

UP: ಮದುವೆಯಾದ ಒಂದೇ ವಾರಕ್ಕೆ ಪತ್ನಿಯ ಭೀಕರ ಕೊಲೆ ಮಾಡಿದ ಪತಿ

0 comments

Lucknow: ಮದುವೆಯಾದ ಒಂದೇ ವಾರದಲ್ಲಿ ಪತಿಯೊಬ್ಬ ಪತ್ನಿಯನ್ನು ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯ ಅಮೌಲಿ ಗ್ರಾಮದಲ್ಲಿ ನಡೆದಿದೆ.

ಮೇ 17 ರಂದು ರಾಜ್‌ಪಾಲ್‌ (44) ತನ್ನ ಪತ್ನಿ ಆರತಿ ಪಾಲ್‌ (26) ಳನ್ನು ಹೊಡೆದು ಆಕೆಯ ಪ್ರಾಣ ಕಸಿದುಕೊಂಡಿದ್ದಾನೆ. ಈಕೆ ಈತನಿಗೆ ಮೂರನೇ ಪತ್ನಿಯಾಗಿದ್ದು, ಮದುವೆಯಾದ ಒಂದೇ ವಾರದಲ್ಲಿ ಇವರಿಬ್ಬರ ಮಧ್ಯೆ ಬಿರುಕು ಕಾಣಿಸಿಕೊಂಡಿದೆ. ನಿತ್ಯ ಜಗಳವಾಗುತ್ತಿದ್ದು, ಯಾವುದೋ ಕಾರಣಕ್ಕೆ ರಾಜು ಆರತಿಯನ್ನು ಥಳಿಸಿದ್ದಾನೆ. ಪರಿಣಾಮ ಆಕೆ ಮೃತಪಟ್ಟಿದ್ದಾಳೆ.

ನೆರೆಹೊರೆಯವರು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ರಾಜ್‌ಪಾಲ್‌ನನ್ನು ಬಂಧನ ಮಾಡಿದ್ದಾರೆ.

You may also like