Home » Wife Swapping: ಸ್ನೇಹಿತನೊಂದಿಗೆ ‘ಪತ್ನಿ ವಿನಿಮಯ’ ಕ್ಕೆ ಮುಂದಾದ ಪತಿ! ತಿರಸ್ಕರಿಸಿದ ಪತ್ನಿಗೆ ಮಾಡಿದ್ದೇನು ಗೊತ್ತಾ?

Wife Swapping: ಸ್ನೇಹಿತನೊಂದಿಗೆ ‘ಪತ್ನಿ ವಿನಿಮಯ’ ಕ್ಕೆ ಮುಂದಾದ ಪತಿ! ತಿರಸ್ಕರಿಸಿದ ಪತ್ನಿಗೆ ಮಾಡಿದ್ದೇನು ಗೊತ್ತಾ?

3 comments
Wife Swapping

Wife Swapping: ಪತ್ನಿಯನ್ನು ಬೇರೆ ಪುರುಷರೊಂದಿಗೆ ವಿನಿಮಯ ಮಾಡಿಕೊಳ್ಳುವುದು (wife swapping) ಇದಕ್ಕೆ ಭಾರತದ ಸಂಸ್ಕೃತಿ ಒಪ್ಪುವುದಿಲ್ಲ ಮತ್ತು ಇದು ಒಂದು ಕೆಟ್ಟ ಅಭ್ಯಾಸವು ಹೌದು. ಆದರೆ ಇದೀಗ ಸಂಗಾತಿಯನ್ನು ಬಲವಂತವಾಗಿ ವಿನಿಮಯ ಮಾಡಿಕೊಳ್ಳುವ ಕೃತ್ಯಕ್ಕೆ ಒತ್ತಾಯಿಸಿದ ಆರೋಪದ ಮೇಲೆ ಪ್ರಕರಣ ಒಂದು ದಾಖಲಿಸಲಾಗಿದೆ.

ಇದನ್ನು ಓದಿ: Vaisakha Purnima: ವೈಶಾಖ ಪೂರ್ಣಿಮದ ದಿನದಂದು ಈ ಕೆಲಸಗಳನ್ನು ಮಾಡಿ, ಜೀವನ ಬಂಗಾರವಾಗುತ್ತದೆ!

ಉತ್ತರಪ್ರದೇಶ ಲಕ್ಕೋದ ಆಶಿಯಾನಾ ಪ್ರದೇಶದ ನಿವಾಸಿ 40 ವರ್ಷದ ಪತ್ನಿ ತನ್ನ ಪತಿ ವಿರುದ್ಧ ದೂರು ದಾಖಲಿಸಿದ್ದು, ದೂರಿನಲ್ಲಿ ತಾನು ವಿನಿಮಯಕ್ಕೆ ಒಪ್ಪದ ಕಾರಣ ತನ್ನನ್ನು ಪತಿ ಹೊಡೆದು ಚಿತ್ರಹಿಂಸೆ ನೀಡಿದ್ದು ಅಲ್ಲದೇ ತನ್ನ ಅಶ್ಲೀಲ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: Job Alert: ಲಿಖಿತ ಪರೀಕ್ಷೆ ಇಲ್ಲದೆ ನೇರ ಉದ್ಯೋಗ! ನಿರುದ್ಯೋಗಿಗಳಿಗೆ ಗುಡ್ ನ್ಯೂಸ್!

ಈಗಾಗಲೇ ಆರೋಪಿಯನ್ನು 2008 ರಲ್ಲಿ ಮದುವೆಯಾಗಿದ್ದ ಮಹಿಳೆಗೆ ಹೆಣ್ಣು ಮಗುವಿದೆ. ಮದುವೆಯಾದಾಗಿನಿಂದಲೂ ತನಗೆ ಚಿತ್ರಹಿಂಸೆ ನೀಡಲಾಗುತ್ತಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಅದು ಹೆಚ್ಚಾಯಿತು ಎಂದು ಆರೋಪಿಸಿದ್ದಾರೆ. ಪತಿಯ ಕ್ರೂರ ವರ್ತನೆ ಮತ್ತು ಅನೈತಿಕ ಕೃತ್ಯಗಳಿಗೆ ಒಳಗಾಗಲು ಹಾಕುತ್ತಿದ್ದ ಒತ್ತಡ ತಡೆಯಲಾರದೇ ತವರು ಮನೆಗೆ ಹೋಗಬೇಕಾಯಿತು ಎಂದು ಮಹಿಳೆ ದೂರಿದ್ದಾರೆ.

ವರದಕ್ಷಿಣಿಗಾಗಿ ನನಗೆ ಚಿತ್ರಹಿಂಸೆ ನೀಡಲಾಗಿತ್ತು. ಆದರೆ ನಾನು ಈ ಮದುವೆಯನ್ನು ಉಳಿಸಿಕೊಳ್ಳಲು ಪೊಲೀಸರಿಗೆ ದೂರು ನೀಡಲಿಲ್ಲ. ನನ್ನ ಪತಿ ಮತ್ತು ಅತ್ತೆ ನನಗೆ ಹಿಂಸೆ ನೀಡುತ್ತಿದ್ದರು. ಅಲ್ಲದೇ ನಾನು ಮಲಗಿದ್ದಾಗ ಗಂಡ ನನ್ನ ಅನುಮತಿ ಇಲ್ಲದೇ ಪೋಟೋಗಳನು ಕ್ಲಿಕ್ಕಿಸಿಕೊಂಡಿದ್ದು ಅಲ್ಲದೇ ಅದನ್ನು ತನ್ನ ಸ್ನೇಹಿತರ ಜೊತೆಗೆ ಹಂಚಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಅಪರಿಚಿತ ದಂಪತಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ತನ್ನ ಮೇಲೆ ಒತ್ತಡ ಹೇರಲಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಎಫ್‌ಐಆ‌ರ್ ದಾಖಲಾಗಿದೆ.

You may also like

Leave a Comment