Illegal Affair: ಅಕ್ರಮ ಸಂಬಂಧಕ್ಕೆ ಮಕ್ಕಳು ಅಡ್ಡಿ ಎಂದು ತನ್ನ ಹೆತ್ತ ಮಕ್ಕಳನ್ನೇ ಕೊಲೆ ಮಾಡಿರುವ ಘಟನೆಯೊಂದು ರಾಮನಗರ ಪಟ್ಟಣದ ಕೆಂಪೇಗೌಡ ಸರ್ಕಲ್ ಬಳಿ ನಡೆದಿದೆ.
ಗ್ರಗೋರಿ ಫ್ರಾನ್ಸೀಸ್(30), ಸ್ವೀಟಿ (21) ಎಂಬುವವರೇ ಆರೋಪಿಗಳಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. 3 ವರ್ಷದ ಕಬಿಲ್, 11 ತಿಂಗಳ ಕಬೀಲನ್ ಮೃತ ಮಕ್ಕಳು.
ಆರೋಪಿ ಸ್ವೀಟಿಗೆ ಶಿವು ಎಂಬುವವರ ಜೊತೆ ಮದುವೆಯಾಗಿದ್ದು, ಆದರೆ ಈಕೆ ಪತಿಯನ್ನು ಬಿಟ್ಟು ಕೆಲವು ದಿನಗಳಿಂದ ಆರೋಪಿ ಫ್ರಾನ್ಸೀಸ್ ಜೊತೆ ರಾಮನಗರದಲ್ಲಿ ವಾಸ ಮಾಡುತ್ತಿದ್ದಳು. ಶುಕ್ರವಾರ ರಾತ್ರಿ ಸಂಭೋಗದ ಸಮಯದಲ್ಲಿ 11 ತಿಂಗಳ ಮಗು ಅತ್ತಿದ್ದು, ಇದರಿಂದ ಕೋಪಗೊಂಡ ಸ್ವೀಟಿ, ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನಂತರ ಇಂದು (ಅ.13) ಬೆಳಗ್ಗೆ ಇಬ್ಬರೂ ಸೇರಿ ಮಗುವನ್ನು ತೆಗೆದುಕೊಂಡು ಸ್ಮಶಾನಕ್ಕೆ ಬಂದಿದ್ದಾರೆ.
ಆದರೆ ಸ್ಮಶಾನದ ಸಿಬ್ಬಂದಿ ಮಗುವಿನ ದೇಹದ ಮೇಲಿನ ಗಾಯದ ಗುರುತುಗಳನ್ನು ನೋಡಿ, ಮಗುವಿಗೆ ಏನಾಗಿತ್ತು ಎಂದು ಇಬ್ಬರಲ್ಲಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ತಾಯಿ ಮಗುವಿಗೆ ಖಾಯಿಲೆ ಇತ್ತು, ಜ್ವರದಿಂದ ಬಳಲಿ ಸತ್ತು ಹೋಗಿದೆ ಎಂದು ಹೇಳಿದ್ದಾರೆ. ಆದರೂ ಅನುಮಾನಗೊಂಡ ಸ್ಮಶಾನದ ಸಿಬ್ಬಂದಿ, ಮೊಬೈಲ್‌ನಲ್ಲಿ ಮಗುವಿನ ದೇಹದ ಫೋಟೋ ತೆಗೆದಿದ್ದು, ನಂತರ ಪೊಲೀಸರಿಗೆ ಫೋಟೋ ನೀಡಿದ್ದಾರೆ.
ಐಜೂರು ಪೊಲೀಸರು ಸ್ವೀಟಿ ಮತ್ತು ಪ್ರಾನ್ಸಿಸ್‌ನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮಾಡಿದಾಗ ನಿಜ ವಿಷಯ ಬಾಯಿಬಿಟ್ಟಿದ್ದಾರೆ.
