Home » Belthangady: ತರಕಾರಿ ಸಾಗಾಟದ ವಾಹನದಲ್ಲಿ ಅಕ್ರಮ ಗೋ ಸಾಗಾಟ!

Belthangady: ತರಕಾರಿ ಸಾಗಾಟದ ವಾಹನದಲ್ಲಿ ಅಕ್ರಮ ಗೋ ಸಾಗಾಟ!

0 comments

Belthangady: ಮಂಗಳೂರಿಗೆ ಅಕ್ರಮವಾಗಿ ಗೋ ಸಾಗಾಟ ನಡೆಸಲು ಹೊರಟ ವಾಹನವನ್ನು ಕಳಿಯ ನ್ಯಾಯತರ್ಪ ಸಮೀಪದ ಜಾರಿಗೆಬೈಲು ಎಂಬಲ್ಲಿ ಇಂದು ಬೆಳಗ್ಗೆ ತಡೆ ಹಿಡಿಯಲಾಗಿದೆ.

ಸುಮಾರು 10 ರಿಂದ 15 ಹಸುಗಳನ್ನು ಗೋವಧೆ ಮಾಡಲು ವಾಹನದಲ್ಲಿ ಸಾಗಾಟ ಮಾಡುವ ಕುರಿತು ಖಚಿತ ಮಾಹಿತಿ ಪಡೆದು ಹಿಂದು ಸಂಘಟನೆ ಕಾರ್ಯಕರ್ತರು ವಾಹನವನ್ನು ಹಿಂಬಾಲಿಸಿ ತಡೆ ಹಿಡಿದಿದ್ದಾರೆ.

ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು, ವಾಹನ ಹಾಗೂ 15 ಕ್ಕೂ ಅಧಿಕ ಗೋವುಗಳನ್ನು ವಶಕ್ಕೆ ಪಡೆಯಲಾಗಿದೆ.

You may also like