Home » Illicit Relationship: ಅನೈತಿಕ ಸಂಬಂಧ; 15 ದಿನದ ಹೆಣ್ಣು ಮಗುವನ್ನು ಆಟೋದಲ್ಲಿಟ್ಟು ಪರಾರಿ; ಜೋಡಿ ಪತ್ತೆ

Illicit Relationship: ಅನೈತಿಕ ಸಂಬಂಧ; 15 ದಿನದ ಹೆಣ್ಣು ಮಗುವನ್ನು ಆಟೋದಲ್ಲಿಟ್ಟು ಪರಾರಿ; ಜೋಡಿ ಪತ್ತೆ

0 comments
Baby Alive before Cremation

Illicit Relationship: ಅನೈತಿಕ ಸಂಬಂಧಕ್ಕೆ ಹುಟ್ಟಿದ 15 ದಿನಗಳ ಹೆಣ್ಣು ಮಗುವೊಂದನ್ನು ರಸ್ತೆ ಬದಿಯ ಆಟೋದಲ್ಲಿ ಮಲಗಿಸಿ ಪರಾರಿಯಾಗಿದ್ದ ಜೋಡಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಎ.24 ರಂದು ಮುಂಜಾನೆ ಎಂಟಿಟಿಸಿ ಕ್ವಾರ್ಟ್ರಸ್ ರಸ್ತೆ ಬದಿ ನಿಲುಗಡೆ ಮಾಡಿದ್ದ ಆಟೋ ರಿಕ್ಷಾದಲ್ಲಿ ಮಗು ಅಳುತ್ತಿರುವುದು ಕೇಳಿ ಬಂದಿದೆ. ವಾಕಿಂಗ್‌ ಮಾಡುತ್ತಿದ್ದ ಸಾರ್ವಜನಿಕರು ಆಟೋ ‌ಬಳಿ ಹೋಗಿ ನೋಡಿದಾಗ ಮಗು ಇರುವುದು ಕಂಡು ಬಂದಿದೆ. ನಂತರ ಸ್ಥಳಕ್ಕೆ ವಿಷಯ ತಿಳಿಸಿದ್ದು, ಪೊಲೀಸರು ಬಂದು ಪರಿಶೀಲನೆ ಮಾಡಿ, ಮಕ್ಕಳ ಕಲ್ಯಾಣಾಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿ ಆ ಮಗುವನ್ನು ರಕ್ಷಣೆ ಮಾಡಿದ್ದಾರೆ.

ನಂತರ ಈ ಕುರಿತು ಪ್ರಕರಣ ದಾಖಲು ಮಾಡಿದ್ದರು. ಸಿಸಿಟಿವಿ ದೃಶ್ಯಾವಳಿ ನೋಡಿದಾಗ ಓರ್ವ ಮಹಿಳೆ ಹಾಗೂ ಪುರುಷ ಮಗುವನ್ನು ಎತ್ತಿಕೊಂಡು ಬಂದು ರಸ್ತೆಯ ಬದಿ ಆಟೋರಿಕ್ಷಾದಲ್ಲಿ ಮಲಗಿಸಿರುವುದು ಪತ್ತೆಯಾಗಿದೆ. ನಂತರ ಇಬ್ಬರು ಮಡಿಕೇರಿಗೆ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿ ಪರಾರಿಯಾಗಿದ್ದಾರೆ. ಇದರ ಸುಳಿವು ಹಿಡಿದ ಪೊಲೀಸರು ಆ ವ್ಯಕ್ತಿ ಹಾಗೂ ಮಹಿಳೆಯನ್ನು ವಿರಾಜಪೇಟೆಯಲ್ಲಿ ಪತ್ತೆ ಮಾಡಿದ್ದರು.

ವಿರಾಪೇಟೆಯ ಅಪ್ಪಣ್ಣ ಹಾಗೂ 30 ವರ್ಷದ ಮಹಿಳೆಯ ಅನೈತಿಕ ಸಂಬಂಧಕ್ಕೆ ಹುಟ್ಟಿದ ಮಗು ಇದಾಗಿದೆ. ಮದುವೆಯಾಗಿ ಮೂರು ಮಕ್ಕಳಿರುವ ಅಪ್ಪಣ್ಣ, 30 ವರ್ಷದ ವಿಧವೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ವಿಧವೆಗೆ ಕೂಡಾ ಒಂದು ಮಗುವಿದೆ. ಅನೈತಿಕ ಸಂಬಂಧದಿಂದ ಹುಟ್ಟಿದ ಹೆಣ್ಣು ಮಗುವಿಗೆ ಸೀಳು ತುಟಿ ಇದ್ದಿದ್ದರಿಂದ ಅಪ್ಪಣ್ಣ ಹಾಗೂ ಆ ಮಹಿಳೆಗೆ ಮಗು ಬೇಕಿರಲಿಲ್ಲ. ಹೀಗಾಗಿ ಇಬ್ಬರೂ ಸೇರಿ ವಿರಾಜಪೇಟೆಯಿಂದ ಬೆಂಗಳೂರಿಗೆ ಬಂದು ರಸ್ತೆ ಬದಿ ನಿಂತಿದ್ದ ಆಟೋ ರಿಕ್ಷಾದಲ್ಲಿ ಮಗುವನ್ನು ಮಲಗಿಸಿ ಪರಾರಿಯಾಗಿದ್ದರ.

ಅಪ್ಪಣ್ಣನನ್ನು ಬಂಧನ ಮಾಡಿ ಪೊಲೀಸರು ಜೈಲಿಗಟ್ಟಿದ್ದಾರೆ. ಮಹಿಳೆಗೆ ಎಚ್ಚರಿಕೆ ನೀಡಿ ಮಗುವನ್ನು ಆರೈಕೆ ಮಾಡಲು ಸೂಚಿಸಲಾಗಿದೆ ಎಂದು ವರದಿಯಾಗಿದೆ.

You may also like