Illicit Relationship: ಪ್ರೀತಿಸಿದ ಯುವಕನೋರ್ವ ತಾನು ಪ್ರೀತಿಸಿದ ಹುಡುಗಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧವಿದೆ ಎಂದು ತಿಳಿದು ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ. ಈ ಘಟನೆ ಕುರಿತು ಮೃತನ ಕುಟುಂಬಸ್ಥರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಇದನ್ನೂ ಓದಿ: Mangalore: ಸಂಸದ ನಳಿನ್‌ಕುಮಾರ್ ಕಟೀಲ್ ಮನೆಗೆ ಕಾರ್ಯಕರ್ತರಿಂದ ಮುತ್ತಿಗೆ ಯತ್ನ
ಅನ್ಬರಾಸನ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕ. ವಿದ್ಯಾ ಎಂಬಾಕೆಗೆ ಈ ಹಿಂದೆ ಮದುವೆಯಾಗಿದ್ದು, ವಿಚ್ಛೇದನ ಪಡೆದಿದ್ದು. ನಂತರ ಅನ್ಬರಾಸನ್ ಜೊತೆ ಪ್ರೀತಿಯಾಗಿತ್ತು. ಇಬ್ಬರೂ ಆರು ತಿಂಗಳಿನಿಂದ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು. ಇಬ್ಬರೂ ತಾವು ಪತಿ ಪತ್ನಿ ಎಂದು ಹೇಳಿ ಚಿಕ್ಕನಾಗಮಂಗಲದ ಬಾಡಿಗೆ ಮನೆಯಲ್ಲಿದ್ದರು.
ವಿದ್ಯಾ ಐಟಿ ಕಂಪನಿ ಉದ್ಯೋಗಿ. ಅನ್ಬರಾಸನ್ ಪ್ಲಿಪ್ ಕಾರ್ಟ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ವಿದ್ಯಾ ಅನ್ಬರಾಸನ್ ಜೊತೆ ಪ್ರೀತಿಯಲ್ಲಿರುವಾಗಲೇ ಇನ್ನೋರ್ವನ ಸಹವಾಸಕ್ಕೆ ಬಿದ್ದಿದ್ದಾಳೆ. ಸಂತೋಷ್ ಎಂಬಾತನ ಜೊತೆ ವಿದ್ಯಾ ಅಕ್ರಮ ಸಂಬಂಧ ಹೊಂದಿದ್ದಳು. ಅನ್ಬರಾಸನ್ ತನ್ನ ಕಣ್ಣಾರೆ ಸಂತೋಷ್ ಮತ್ತು ವಿದ್ಯಾ ಜೊತೆಯಲ್ಲಿರುವುದನ್ನು ಕಂಡಿದ್ದ. ಇದರಿಂದ ನೊಂದ ಅನ್ಬರಾಸನ್ ವಿದ್ಯಾಗೆ ಬುದ್ಧಿವಾದ ಹೇಳಿದರೂ ಕ್ಯಾರೆ ಎನ್ನದ ವಿದ್ಯಾ ತನ್ನ ಚಾಳಿ ಮುಂದುವರಿಸಿದ್ದಾಳೆ. ಇದರಿಂದ ನೊಂದ ಅನ್ಬರಸನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪ ಮಾಡಿದ್ದಾರೆ.
ಅನ್ಬರಸನ್ ತಂದೆ ತಾಯಿ ಯುಡಿಆರ್ ಪ್ರಕರಣವನ್ನು ದಾಖಲು ಮಾಡಿದ್ದರು. ಆದರೆ ವಿದ್ಯಾ ಜೊತೆ ಮಾತನಾಡಿರುವ ಕಾಲ್‌ರೆಕಾರ್ಡ್ ಲಭ್ಯವಾಗಿದ್ದು, ಅದರ ಆಧಾರದ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂದು ಪ್ರಕರಣ ದಾಖಲು ಮಾಡಿದ್ದು, ವಿದ್ಯಾ, ಸಂತೋಷ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
