Home » Jai Shri Ram: ಜೈ ಶ್ರೀರಾಮ್‌ ಎಂದವರ ಮೇಲೆ ಹಲ್ಲೆ ಪ್ರಕರಣ; ಮೂವರು ಅರೆಸ್ಟ್‌, ಒಬ್ಬ ಎಸ್ಕೇಪ್‌

Jai Shri Ram: ಜೈ ಶ್ರೀರಾಮ್‌ ಎಂದವರ ಮೇಲೆ ಹಲ್ಲೆ ಪ್ರಕರಣ; ಮೂವರು ಅರೆಸ್ಟ್‌, ಒಬ್ಬ ಎಸ್ಕೇಪ್‌

2 comments
Jai Shri Ram

Jai Shri Ram: ಜೈ ಶ್ರೀರಾಮ್‌ ಎಂದಿದ್ದ ಹಿಂದೂ ಯುವಕರ ಮೇಲೆ ಹಲ್ಲೆ ಮಾಡಿದ್ದ ಮುಸ್ಲಿಂ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ಶ್ರೀರಾಮನವಮಿ ಹಿನ್ನೆಲೆಯಲ್ಲಿ ಕಾರಿನಲ್ಲಿ ಬರುತ್ತಿದ್ದ ಮೂವರು ಯುವಕರು ಕಾರಿನೊಳಗೆ ಜೈ ಶ್ರೀರಾಮ್‌ ಘೋಷಣೆ ಕೂಗಿದಾಗ ಈ ವೇಳೆ ರಸ್ತೆ ಮೇಲೆ ಬೈಕ್‌ನಲ್ಲಿ ಬಂದ ಮುಸ್ಲಿಂ ಯುಕವರಿಬ್ಬರು ಗಲಾಟೆ ಮಾಡಿ, ಅವಾಚ್ಯ ಶಬ್ದಗಳ ನಿಂದನೆ ಮಾಡಿದ್ದರು.

ಇದನ್ನೂ ಓದಿ: Karnataka Rain: ರಾಜ್ಯದಲ್ಲಿ ಪೂರ್ವ ಮುಂಗಾರು ಚುರುಕು; 3 ದಿನ ಭರ್ಜರಿ ಮಳೆ

ಜೈ ಶ್ರೀರಾಮ್‌ ನೋ, ಓನ್ಲಿ ಅಲ್ಲಾ ಹು ಅಕ್ಬರ್‌ ಅಂತ ಹೇಳಬೇಕು ಎಂದು ಧಮ್ಕಿ ಹಾಕಿದ್ದು, ಅಲ್ಲಾ ಎಂದು ಕೂಗುವಂತೆ ಒತ್ತಾಯ ಮಾಡಿದ್ದರು. ಹಾಗೂ ಕಾರಿನಲ್ಲಿದ್ದ ಯುವಕರಿಗೆ ಹಲ್ಲೆ ಕೂಡಾ ಮಾಡಿದ್ದರು. ಇದೀಗ ಮೂವರು ಯುವಕರನ್ನು ಪೊಲೀಸರು ಬಂಧನ ಮಾಡಿದ್ದು, ಹಲ್ಲೆ ನಡೆಸಿದ್ದ ಓರ್ವ ಆರೋಪಿ ಎಸ್ಕೇಪ್‌ ಆಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಇದನ್ನೂ ಓದಿ: Rahul Gandhi: ಕಾಂಗ್ರೆಸ್ ಗೆದ್ದರೆ ಮಹಿಳೆಯರ ಖಾತೆಗೆ 1 ಲಕ್ಷ ಜಮಾ- ರಾಹುಲ್ ಗಾಂಧಿ ಘೋಷಣೆ !!

ಆರೋಪಿಗಳನ್ನು ಫರ್ಮನ್‌, ಸಮೀರ್‌ ಸೇರಿ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದು, ಇನ್ನೋರ್ವ ಎಸ್ಕೇಪ್‌ ಆಗಿದ್ದಾನೆ. ವಿದ್ಯಾರಣ್ಯಪುರ ಪೊಲೀಸ್‌ ಠಾಣೆ ಪೊಲೀಸರು ಆತನ ಹುಡುಕಾಟ ಮುಂದುವರೆಸಿದ್ದಾರೆ.

You may also like

Leave a Comment