Home » Jaipur Ed: ಮದುವೆ ವೇಳೆ ಇಡಿ ದಾಳಿ: 15000 ಕೋಟಿ ಹಗರಣದ ಆರೋಪಿ ವರ ಎಸ್ಕೇಪ್‌

Jaipur Ed: ಮದುವೆ ವೇಳೆ ಇಡಿ ದಾಳಿ: 15000 ಕೋಟಿ ಹಗರಣದ ಆರೋಪಿ ವರ ಎಸ್ಕೇಪ್‌

0 comments
Marriage

Jaipur Ed: ಮದುವೆ ಸಮಾರಂಭಕ್ಕೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದನ್ನು ಕಂಡು ಮಂಟಪದಿಂದಲೇ ವರ ಓಡಿಹೋಗಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ರಾಜಸ್ಥಾನದ ಪ್ರಸಿದ್ಧ ಫೇರ್‌ಮಾಂಟ್‌ ಹೋಟೆಲ್‌ನಲ್ಲಿ ಸೌರಭ್‌ ಅಹುಜಾ ಎನ್ನುವವರ ವಿವಾಹ ಭಾರೀ ಅದ್ಧೂರಿಯಾಗಿ ನಡೆಯುತ್ತಿತ್ತು. ಈ ಸೌರಭ್‌ ಅಹುಜಾ ಮಹಾದೇವ್‌ ಬೆಟ್ಟಿಂಗ್‌ ಆಪ್‌ ಹಗರಣದ ಆರೋಪಿ. 15000 ಕೋಟಿ ರೂಪಾಯಿಗಳ ಮಹಾದೇವ್‌ ಬೆಟ್ಟಿಂಗ್‌ ಆಪ್‌ ಹಗರಣಕ್ಕೆ ಸಂಬಂಧಪಟ್ಟಂತೆ ಈ ದಾಳಿ ಮಾಡಲಾಗಿತ್ತು. ಸೌರಭ್‌ ಅಹುಜಾ ಈ ಪ್ರಕರಣದ ಪ್ರಮುಖ ಆರೋಪಿ.

ಇಡಿ ಅಧಿಕಾರಿಗಳಿಗೆ ಮದುವೆ ನಡೆಯುತ್ತಿದ್ದ ಕುರಿತು ಮಾಹಿತಿ ಪಡೆದಿದ್ದು, ಸಪ್ತಪದಿ ತುಳಿಯುವ ಮುನ್ನವೇ ಬಂಧನಕ್ಕೆ ಬರುತ್ತಿರುವ ಸೂಚನೆ ದೊರಕಿದ ಸೌರಭ್‌ ಮಂಟಪದಿಂದಲೇ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಮಂಟಪಕ್ಕೆ ಬಂದ ಅಧಿಕಾರಿಗಳು ಹಗರಣಕ್ಕೆ ಸಂಬಂಧಪಟ್ಟಂತೆ ಪ್ರಣವೇಂದ್ರ ಹಾಗೂ ಇತರ ಇಬ್ಬರನ್ನು ಬಂಧನ ಮಾಡಿದ್ದಾರೆ.

 

You may also like