Delhi: ಪಾಕಿಸ್ತಾನದ ಪರ ಬೇಹುಗಾರಿಕೆ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಕುರಿತು ಒಂದಾದಮೇಲೊಂದು ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿದ್ದು, 33 ವರ್ಷದ ಯೂಟ್ಯೂಬರ್‌ನ ಡಿಜಿಟಲ್ ಸಾಧನಗಳನ್ನು ಪರಿಶೀಲಿಸಿದ ಹರಿಯಾಣ ಪೊಲೀಸರಹಲವು ರಹಸ್ಯಗಳನ್ನು ಬಯಲಿಗೆಳೆದಿದ್ದಾರೆ.
ಪೊಲೀಸ್ ಮೂಲಗಳು ಹೇಳುವಂತೆ, ಜ್ಯೋತಿ ನಾಲ್ವರು ಪಾಕಿಸ್ತಾನಿ ಗುಪ್ತಚರ ಏಜೆಂಟ್‌ಗಳೊಂದಿಗೆ ಸಂಪರ್ಕದಲ್ಲಿದ್ದು, ನಾಲ್ವರ ಜೊತೆಗೂ ಪ್ರತ್ಯೇಕವಾಗಿ ಮಾತನಾಡುತ್ತಿದ್ದರು. ನಾಲ್ವರ ಪೈಕಿ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನ ಡ್ಯಾನಿಶ್, ಅಹ್ಸಾನ್ ಮತ್ತು ಶಾಹಿದ್ ಸೇರಿದ್ದಾರೆ. ಸದ್ಯ ಪಾಕಿಸ್ತಾನ ಭದ್ರತಾ ಸಂಸ್ಥೆಯೊಳಗಿನ ಈ ಏಜೆಂಟರ ಹುದ್ದೆಗಳು ಮತ್ತು ಉದ್ಯೋಗ ಶೀರ್ಷಿಕೆಗಳನ್ನು ದೃಢೀಕರಿಸಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತ ಇರುವುದು ಕಾಣಬಹುದಾಗಿದೆ.
ಆಕೆಯ ಡಿಜಿಟಲ್ ಉಪಕರಣಗಳನ್ನು ತೆಗೆದುಕೊಂಡಿರುವ ಪೊಲೀಸರು ಒಟ್ಟಾರೆಯಾಗಿ 12 ಸಾವಿರ ಜಿಬಿಡೇಟಾವನ್ನು ರಿಟ್ರೀವ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಪಾಕ್ ಜೊತೆಗಿನ ಇನ್ನಷ್ಟು ಸುಳಿವುಗಳನ್ನು ಪತ್ತೆಹಚ್ಚಲು ಡೇಟಾಗಳನ್ನ ಪರಿಶೀಲಿಸಲಾಗುತ್ತಿದೆ.
ಇನ್ನೂ ಈ ಡೇಟಾಗಳ ಪ್ರಕಾರ, ಯೂಟ್ಯೂಬರ್ ಜ್ಯೋತಿಗೆ ತಾನು ಮಾತಾಡ್ತಿರೋದು ಐಎಸ್‌ಐ ಅಧಿಕಾರಿಗಳ ಜೊತೆ ಎಂದು ಗೊತ್ತಿತ್ತು, ಆದರೂ ಭಯ ಇಲ್ಲದಂತೆ ಅವರೊಂದಿಗಿನ ಸಂಪರ್ಕವನ್ನು ಮುಂದುವರಿಸಿದ್ದಳು ಅನ್ನೋದು ತಿಳಿದುಬಂದಿದ್ದು, ಇನ್ನೂ ಪಾಕಿಸ್ತಾನ ಪ್ರವಾಸದ ಸಮಯದಲ್ಲಿ ಜ್ಯೋತಿ ಮಲ್ಹೋತ್ರಾಗೆ ನೀಡಿದ ವಿಐಪಿ ಸ್ವಾಗತದ ಬಗ್ಗೆ ಈಗ ಭಾರೀ ಅನುಮಾನ ಮೂಡಿದೆ. ಪಾಕ್‌ನ ಭದ್ರತಾ ಮತ್ತು ಗುಪ್ತಚರ ಅಧಿಕಾರಿಗಳು ಭಾಗವಹಿಸಿದ್ದ ಉನ್ನತ ಮಟ್ಟದ ಪಾರ್ಟಿಗಳಿಗೆ ಆಕೆಯನ್ನೂ ಆಹ್ವಾನಿಸಲಾಗಿತ್ತು ಎಂದು ವರದಿಯಾಗಿದೆ.
