Home » Kadaba: ಕಡಬ: ಸ್ನಾನಕ್ಕೆಂದು ನೀರಿಗಿಳಿದ ಯುವಕ ಸಾವು

Kadaba: ಕಡಬ: ಸ್ನಾನಕ್ಕೆಂದು ನೀರಿಗಿಳಿದ ಯುವಕ ಸಾವು

0 comments

Kadaba: ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಭಾನುವಾರ ಮಧ್ಯಾಹ್ನ ಕಡಬದಲ್ಲಿ ನಡೆದಿದೆ.

ಇಚ್ಚಂಪಾಡಿ ನಿವಾಸಿ ಜಯಾನಂದ ಶೆಟ್ಟಿಯವರ ಮಗ ಚೇತನ್‌ ಶೆಟ್ಟಿ (21) ಮೃತ ಯುವಕ.

ಈತ ಮಂಗಳೂರಿನಲ್ಲಿ ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದು, ಇಂದು ರಜೆ ಇದ್ದ ಕಾರಣ ಮನೆಯಲ್ಲಿಯೇ ಇದ್ದನು. ಹಾಗಾಗಿ ಬೆಳಿಗ್ಗೆ ಕ್ರಿಕೆಟ್‌ ಆಡಲೆಂದು ಹೋದ ಚೇತನ್‌ ಮಧ್ಯಾಹ್ನದ ಸಮಯದಲ್ಲಿ ಸ್ನೇಹಿತರ ಜೊತೆ ಇಚ್ಲಂಪಾಡಿ ಸೇತುವೆ ಬಳಿ ಗುಂಡ್ಯ ಹೊಳಗೆ ಸ್ನಾನಕ್ಕೆಂದು ಹೋಗಿದ್ದಾನೆ. ಆದರೆ ಹೊಳೆಯ ನೀರಿನ ಅಳತೆ ಅರಿಯದೇ ಮಧ್ಯಾಹ್ನ 1.30 ಗಂಟೆಯ ಸುಮಾರಿಗೆ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ.

ಕಡಬ ಸರಕಾರಿ ಶವಾಗಾರಕ್ಕೆ ಮೃತದೇಹವನ್ನು ಸಾಗಿಸಲಾಗಿದ್ದು, ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like