Home » Kadaba: ಕಡಬ ಕಾಲೇಜಿನಲ್ಲಿ ಆಸಿಡ್‌ ದಾಳಿ ಪ್ರಕರಣ; ಘಟನೆ ಕುರಿತು ಎಸ್‌.ಪಿ.ಏನಂದ್ರು?

Kadaba: ಕಡಬ ಕಾಲೇಜಿನಲ್ಲಿ ಆಸಿಡ್‌ ದಾಳಿ ಪ್ರಕರಣ; ಘಟನೆ ಕುರಿತು ಎಸ್‌.ಪಿ.ಏನಂದ್ರು?

1 comment
Kadaba

ಇಂದು ಇಡೀ ರಾಜ್ಯವೇ ಬೆಚ್ಚಿ ಬೀಳೋ ಘಟನೆಯೊಂದು ನಡೆದಿದ್ದು, ಹಾಡಹಗಲೇ ಕಾಲೇಜಿಗೆ ನುಗ್ಗಿದ ವ್ಯಕ್ತಿಯೋರ್ವ ಯುವತಿಯೋರ್ವಳ ಮೇಲೆ ಆಸಿಡ್‌ ದಾಳಿ ಮಾಡಿದ್ದು, ಯುವತಿ ಜೊತೆ ಇದ್ದ ಇನ್ನಿಬ್ಬರು ಯುವತಿಯರಿಗೂ ಗಾಯಗಳಾಗಿದ್ದು, ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯ ಕುರಿತು ಇದೀಗ ಎಸ್‌ಪಿ ಮಾಹಿತಿಯನ್ನು ನೀಡಿದ್ದಾರೆ.

ಇದನ್ನೂ ಓದಿ: Bribery Case: ಲಂಚ ಪ್ರಕರಣಗಳಲ್ಲಿ ಶಾಸಕರಿಗೆ ವಿನಾಯಿತಿ ನೀಡುವ 1998ರ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ 

ಇವತ್ತು ಸುಮಾರು 9.55 ಕ್ಕೆ ಈ ಘಟನೆ ನಡೆದಿದೆ. ಸರಕಾರಿ ಪದವಿ ಪೂರ್ವ ಕಾಲೇಜು, ಕಡಬದಲ್ಲಿ, ಸೈನ್ಸ್‌ನಲ್ಲಿ ಓದುತ್ತಿರೋ ಹುಡುಗಿಗೆ ಆಸಿಡ್‌ ಅಟ್ಯಾಕ್‌ ಆಗಿದೆ. ಈಕೆಯ ಪಕ್ಕದಲ್ಲಿ ಇದ್ದ ಹುಡುಗಿಯರಿಗೆ ಕೂಡಾ ಆಸಿಡ್‌ ಬಿದ್ದಿದ್ದು, ಮೈನರ್‌ ಇಂಜ್ಯುರ್‌ ಆಗಿದೆ. ಇನ್ನೋರ್ವ ಹುಡುಗಿಗೆ ಮುಖಕ್ಕೆ ಆಸಿಡ್‌ ಬಿದ್ದಿದ್ದು, ಟ್ರೀಟ್‌ಮೆಂಟ್‌ ನಡೆಯುತ್ತಿದೆ.

ಆರೋಪಿ ಅಬಿನ್‌ ಎಂದು. ಈತ ಮೂಲತಃ ಕೇರಳ. ಮಲ್ಲಪುರಂ ನವನು. ಇಬ್ಬರೂ ಕೂಡಾ ಒಂದೇ ಕೋಮಿನವರು. ಈ ಹುಡುಗಿ ಕೇರಳದವಳು. ಈತನ ಮನೆಯ ಪಕ್ಕನೇ ಹುಡುಗಿಯ ತಾಯಿ ಮನೆ ಇದೆ. ಇದು ಮೇಲ್ನೋಟಕ್ಕೆ ಲವ್‌ ರಿಜೆಕ್ಷನ್‌ ಆಗಿರುವುದು ಕಂಡು ಬಂದಿದೆ. ಶಾಲೆಗೆ ಈತ ಯೂನಿಫಾರಂ ಹಾಕಿಕೊಂಡೇ ಕಾಲೇಜಿಗೆ ಬಂದಿದ್ದು, ಆ ಯೂನಿಫಾರಂ ಕೊಟ್ಟದ್ದು ಯಾರು ಎಂದು ತನಿಖೆ ನಡೆಯುತ್ತಿದೆ. ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಎಸ್‌ಪಿ ಹೇಳಿದ್ದಾರೆ.

You may also like

Leave a Comment