Home » Kanakapura: ಮಗು ಹಠ ಮಾಡ್ತಿದೆ ಎಂದು ಕೈಗೆ ಬರೆ, ಗುದದ್ವಾರಕ್ಕೆ ಖಾರದಪುಡಿ ಹಾಕಿದ ಅಂಗನವಾಡಿ ಸಹಾಯಕಿ!

Kanakapura: ಮಗು ಹಠ ಮಾಡ್ತಿದೆ ಎಂದು ಕೈಗೆ ಬರೆ, ಗುದದ್ವಾರಕ್ಕೆ ಖಾರದಪುಡಿ ಹಾಕಿದ ಅಂಗನವಾಡಿ ಸಹಾಯಕಿ!

0 comments

Kanakapura: ಅಂಗನವಾಡಿಯಲ್ಲಿ 2.5 ವರ್ಷದ ಮಗು ಹಠ ಮಾಡುತ್ತಿತ್ತು ಎಂದು ಅಂಗನವಾಡಿ ಸಹಾಯಕಿಯೊಬ್ಬರು ಮಗುವಿನ ಕೈ ಮೇಲೆ ಬರೆಹಾಕಿ, ಡೈಪರ್‌ಗೆ ಖಾರದ ಪುಡಿ ಹಾಕಿ ವಿಕೃತಿ ಮೆರೆದಿರುವ ಘಟನೆ ಮಂಗಳವಾರ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಹಾರಾಜರಕಟ್ಟೆ ಗ್ರಾಮದಲ್ಲಿ ನಡೆದಿದೆ.

ದೀಕ್ಷಿತ್‌ ಎನ್ನುವ ಪುಟ್ಟ ಬಾಲಕನೇ ಹಲ್ಲೆಗೊಳಗಾದವ. ಮಗುವಿನ ಪೋಷಕರಾದ ರಮೇಶ್‌ ನಾಯಕ್‌, ಚೈತ್ರಾಬಾಯಿ ತಮ್ಮ ಮಗುವನ್ನು ಕರೆದುಕೊಂಡು ಬರಲು ಅಂಗನವಾಡಿಗೆ ತೆರಳಿದಾಗ ಮಗು ಅಳುತ್ತಿರುವುದು ಕಂಡಿದೆ. ಗಮನಿಸಿದಾಗ ವಿಚಾರ ತಿಳಿದು ಬಂದಿದೆ.

ಈ ಕುರಿತು ಪೋಷಕರು ಸಿಡಿಪಿಒ ತಾಲೂಕು ಅಧಿಕಾರಿ ನಾರಾಯಣ್‌ ಅವರಿಗೆ ದೂರನ್ನು ನೀಡಿದ್ದಾರೆ. ಅವರು ಕೂಡಲೇ ಘಟನಾ ಸ್ಥಳಕ್ಕೆ ಬಂದಿದ್ದು, ಅಂಗನವಾಡಿ ಸಹಾಯಕಿಯ ವಿಚಾರಣೆ ನಡೆಸಿ, ಮೇಲಾಧಿಕಾರಿಗಳಿಗೆ ಪತ್ರ ಬರೆದು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಮಗುವಿನ ತಂದೆ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಸಿಬ್ಬಂದಿಯ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

You may also like