Home » Kanpur Crime News: ಕಾಳಿ ವೇಷ ಧರಿಸಿ ಮಕ್ಕಳ ಕಥಾನಕ ಪ್ರದರ್ಶನ; 11 ವರ್ಷದ ಬಾಲಕ ಸಾವು

Kanpur Crime News: ಕಾಳಿ ವೇಷ ಧರಿಸಿ ಮಕ್ಕಳ ಕಥಾನಕ ಪ್ರದರ್ಶನ; 11 ವರ್ಷದ ಬಾಲಕ ಸಾವು

0 comments
Kanpur Crime News

Kanpur Crime News: ಕಾಳಿ ಮಾತೆಯ ಕಥಾನಕ ಪ್ರದರ್ಶನ ಮಾಡಲು ಮುಂದಾದ ಮಕ್ಕಳು ಕೈಗೆ ಸಿಕ್ಕ ವಸ್ತುಗಳನ್ನು ಹಿಡಿದು ಕಥಾನಕ ಆರಂಭ ಮಾಡಿದ್ದಾರೆ. ಆದರೆ ರಾಕ್ಷಸರ ವಧೆ ಪ್ರಸಂಗದ ವೇಳೆ ಕಾಳಿ ವೇಷಧರಿಸಿದ 14 ವರ್ಷದ ಬಾಲಕನಿಗೆ ತ್ರಿಶೂಲ ದೊರಕದ ಕಾರಣ ಚಾಕು ಹಿಡಿದು ರಂಗ ಪ್ರವೇಶ ಮಾಡಿದ್ದಾನೆ. ಇತ್ತ 11 ವರ್ಷದ ಬಾಲಕ ರಾಕ್ಷಸನಾಗಿ ವೇಷ ತೊಟ್ಟಿದ್ದು, ರಾಕ್ಷಸರ ವಧೆಯಲ್ಲಿ ಕಾಳಿ ಚಾಕು ಬೀಸಿದ ಏಟಿಗೆ ಬಾಲಕನ ಕುತ್ತಿಗೆ ಕೊಯ್ದಿದೆ.

ಇದನ್ನೂ ಓದಿ: Uppinangady: ಹೃದಯಾಘಾತದಿಂದ ಯುವಕ ಸಾವು

ಪರಿಣಾಮ ತೀವ್ರ ರಕ್ತಸ್ರಾವ ಉಂಟಾಗಿ, 11 ವರ್ಷದ ಬಾಲಕ ಮೃತ ಹೊಂದಿದ್ದಾನೆ. ಈ ಘಟನೆ ಕಾನ್ಪುರದಲ್ಲಿ ನಡೆದಿದೆ.

ಇದನ್ನೂ ಓದಿ: ullala: ಕಾರು ಡಿಕ್ಕಿ ಹೊಡದು ಬಿಜೆಪಿ ಕಾರ್ಯಕರ್ತ ಸಾವು

ಈ ಘಟನೆ ನಡೆದಿರುವುದು ಬಂಬಿಯಾನ್ಪುರ ಗ್ರಾಮದಲ್ಲಿ. 8 ರಿಂದ 14 ವರ್ಷದೊಳಗಿನ ಮಕ್ಕಳು ಕಥಾನಕಕ್ಕೆ ಬೇಕಾದ ವಸ್ತುಗಳನ್ನು ಅಲ್ಲಲ್ಲಿಂದ ಹೆಕ್ಕಿ ತಂದಿದ್ದಾರೆ. ನಂತರ ಕಥಾನಕ ಪ್ರಾರಂಭವಾಗಿದೆ. ಕಾಳಿ ಮಾತೆಯ ಪ್ರಮುಖ ಅಸ್ತ್ರ ತ್ರಿಶೂಲ ದೊರಕಲೇ ಇಲ್ಲ. ಹೀಗಾಗಿ 14 ವರ್ಷದ ಬಾಲಕ ತ್ರಿಶೂಲದ ಬದಲು ಚಾಕು ಹಿಡಿದು ಬಂದಿದ್ದಾನೆ. ಕಥಾನಕ ಮುಂದುವರಿದಿದ್ದು, ರಾಕ್ಷಸನ ಪ್ರವೇಶವಾಗಿದೆ. ಕಥಾನಕದಲ್ಲಿರುವಂತೆ ಕಾಳಿ ಮಾತೆಯ ಕಾಲಿನ ಮೇಲೆ ಮಲಗಬೇಕು. ಈ ವೇಳೆ ಕಾಳಿ ರಾಕ್ಷಸನ ವಧೆ ಮಾಡುತ್ತಾಳೆ. ಹಾಗೆನೇ 11 ವರ್ಷದ ಬಾಲಕ ಕಾಳಿ ಮಾತೆಯ ಕಾಲಿನತ್ತ ಬಾಗಿದಾಗ, ಇತ್ತ ಕಾಳಿ ವೇಷಧಾರಿ ಬಾಲಕ ತನ್ನ ಕೈಯಲ್ಲಿದ್ದ ಚಾಕು ಬೀಸಿದ್ದಾನೆ. ಬೀಸಿದ ರಭಸಕ್ಕೆ ಬಾಲಕನ ಕುತ್ತಿಗೆ ಕೊಯ್ದಿದೆ.

ತೀವ್ರ ರಕ್ತಸ್ರಾವ ಉಂಟಾಗಿ ಬಾಲಕ ಚೀರಾಡಿದ್ದಾನೆ. ಕೂಡಲೇ ಹಿರಿಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಕುಸಿದು ಬಿದ್ದಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಬಾಲಕ ಮೃತ ಹೊಂದಿದ್ದ.

ಪೊಲೀಸರು 14ವರ್ಷದ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಾಗಿದೆ.

You may also like

Leave a Comment