Home » Karkala: ಪಾಕ್‌ ಮೂಲದ ಸಂಖ್ಯೆಯಿಂದ ಅನುಮಾನಾಸ್ಪದ ವಾಟ್ಸಪ್‌ ಸಂದೇಶ

Karkala: ಪಾಕ್‌ ಮೂಲದ ಸಂಖ್ಯೆಯಿಂದ ಅನುಮಾನಾಸ್ಪದ ವಾಟ್ಸಪ್‌ ಸಂದೇಶ

0 comments

Karkala: ಪಾಕಿಸ್ತಾನ ಮೂಲದ ಸಂಖ್ಯೆಯಿಂದ ಕಾರ್ಕಳದ ಯುವಕನೊಬ್ಬನಿಗೆ ಶನಿವಾರ ಅನುಮಾನಾಸ್ಪದ ವಾಟ್ಸಪ್‌ ಸಂದೇಶ ಬಂದಿರುವುದಾಗಿ ವರದಿಯಾಗಿದೆ. ಈ ಕುರಿತು ಅಧಿಕಾರಿಗಳಿಗೆ ಯುವಕ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣನೆ ಮಾಡಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸರು ಸಾರ್ವಜನಿಕರಿಗೆ ಈ ಮೂಲಕ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. “ಅಂತರಾಷ್ಟ್ರೀಯ ಸಂಖ್ಯೆಗಳಿಂದ ಬರುವ ಅನುಮಾನಾಸ್ಪದ ಸಂದೇಶಗಳು ಅಥವಾ ಲಿಂಕ್‌ಗಳಿಗೆ ಪ್ರತಿಕ್ರಿಯಿಸಬೇಡಿ. ಯಾವುದೇ ಕಾರಣಕ್ಕೂ ವೈಯಕ್ತಿಕ ಮಾಹಿತಿ ಅಥವಾ ಒಟಿಪಿಗಳನ್ನು ಹಂಚಿಕೊಳ್ಳಬೇಡಿ” ಎಂದು ಹೇಳಿದ್ದಾರೆ.

ಸೈಬರ್‌ ಬೆದರಿಕೆಗಳ ಕುರಿತು ಎಚ್ಚರಿಕೆಯಿಂದಿರಿ ಎಂದು ಪೊಲೀಸರು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ. ತಕ್ಷಣವೇ ಈ ಕುರಿತು ವರದಿ ಮಾಡಿ ಎಂದು ಕೋರಿದ್ದಾರೆ. ತುರ್ತು ಪರಿಸ್ಥಿತಿಗಳು ಅಥವಾ ಸೈಬರ್‌ ಅಪರಾಧಗಳ ಕುರಿತು ದೂರು ನೀಡಲು 1930 ಗೆ ಕರೆ ಮಾಡಿ www.cybercrime.gov.in ಗೆ ಭೇಟಿ ನೀಡಿ ಅಥವಾ ಹತ್ತಿರದ ಪೊಲೀಸ್‌ ಠಾಣೆಗೆ ದೂರು ನೀಡಿ ಎಂದು ಪ್ರಕಟಣೆ ತಿಳಿಸಿದೆ.

You may also like